

ಉಜಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿ ಪೆರ್ಲ ಇಲ್ಲಿಗೆ ಆನ್ಸ್ ಕ್ಲಬ್ ಉಜಿರೆ ವತಿಯಿಂದ ನಲಿ ಕಲಿ ಮಕ್ಕಳಿಗೆ ತರಗತಿಗೆ 4 ಟೇಬಲ್ ಹಾಗೂ ಎಲ್ಲಾ ತರಗತಿಗೆ 4 ಮೇಜು ನೀಡಿದರು.
ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ. ವಿನಯ ಕಿಶೋರ್, ಸದಸ್ಯೆ ಸ್ಮಿತಾ ಪ್ರಶಾಂತ್ ಇವರು ಕೊಡುಗೆ ಹಸ್ತಾಂತರ ಮಾಡಿದರು. ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷೆ ರೇವತಿ, ಉಪಾಧ್ಯಕ್ಷ ದೇವರಾಜ್, ಮುಖ್ಯ ಶಿಕ್ಷಕಿ ಸೇವಂತಿ, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.