

ಬೆಳ್ತಂಗಡಿ: ವಿವಿಧ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ನಕ್ಸಲ್ ನಾಯಕ ಬಿ.ಜಿ. ಕೃಷ್ಣ ಮೂರ್ತಿ ಮತ್ತು ಸಾವಿತ್ರಿ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಬಂಟ್ವಾಳ ಡಿ.ವೈ.ಎಸ್ಪಿ ವಿಜಯಪ್ರಸಾದ್ ನೇತೃತ್ವದ ತಂಡ ಬಿ.ಜಿ. ಕೃಷ್ಣಮೂರ್ತಿ ಹಾಗೂ ಚಿಕ್ಕಮಗಳೂರು ಮೂಲದ ನಕ್ಸಲ್ ಸಾವಿತ್ರಿ ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ.


ಕುತ್ಲೂರುನಲ್ಲಿ ರಾಮಚಂದ್ರ ಭಟ್ ಎಂಬವರ ಕಾರಿಗೆ ಬೆಂಕಿ ಹಚ್ಚಿರುವುದು, ಮಿತ್ತಬಾಗಿಲಿನಲ್ಲಿ ಪೊಲೀಸರ ಮೇಲೆ ದಾಳಿ ಮಾಡಿರುವುದು ಮತ್ತು ಅರಸಿನಮಕ್ಕಿಯಲ್ಲಿ ಮನೆಯೊಂದರ ಗೋಡೆಯ ಮೇಲೆ ನಕ್ಸಲ್ ಪರ ಬರಹ ಬರೆದಿರುವ ಆರೋಪ ಎದುರಿಸುತ್ತಿರುವ ಇವರನ್ನು ಕೇರಳದ ಜೈಲಿನಿಂದ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬಿ.ಜಿ. ಕೃಷ್ಣ ಮೂರ್ತಿ 2005 ರಿಂದ ನಕ್ಸಲ್ ನಾಯಕತ್ವ ವಹಿಸಿದ್ದು 2021 ನವೆಂಬರ್ 9ರಂದು ಬಂಧನವಾಗಿದ್ದ. ಈತನ ವಿರುದ್ಧ 53 ಕೇಸು ದಾಖಲಾಗಿದೆ. ಸಾವಿತ್ರಿ ಕೇರಳದ ವಯನಾಡಿನ ಕಬನಿ ಮುಖ್ಯಸ್ಥೆರಾಗಿ ಗುರುತಿಸಿಕೊಂಡಿದ್ದು, ಸಾವಿತ್ರಿ ವಿರುದ್ಧ 22 ಕೇಸ್ ದಾಖಲಾಗಿದೆ.