ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಛಂದಸ್ಸು – ಪರಿಚಯಾತ್ಮಕ ಕಾರ್ಯಗಾರ

0

ಪಟ್ಟೂರು: ಕನ್ನಡ ಭಾಷೆಯಲ್ಲಿ ಪದ್ಯಗಳನ್ನು ರಚಿಸುವಾಗ ಅದರದೇ ಆದ ಕೆಲವು ನಿಯಮಗಳಿದ್ದು, ಪದ್ಯದ ರಚನಾ ನಿಯಮಗಳನ್ನು ತಿಳಿಸುವ ಶಾಸ್ತ್ರ ಛಂದಸ್ಸಾಗಿದೆ. ವಿದ್ಯಾರ್ಥಿಗಳು ಪದ್ಯವನ್ನು ರಚಿಸುವಾಗ ಛಂದಸ್ಸಿನಲ್ಲಿ ಬರುವಂತಹ ಪ್ರಾಸಗಳು, ಗಣಗಳು ಸೇರಿದಂತೆ ಇತರ ವಿಚಾರಗಳನ್ನು ಅಳವಡಿಸಿಕೊಂಡಾಗ ಅಂತಹ ಪದ್ಯಗಳು ವಿಶೇಷ ಮಹತ್ವವನ್ನು ಪಡೆಯುತ್ತವೆ ಎಂದು ಪಟ್ಟೂರಿನ ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ನುಡಿದರು.

ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಛಂದಸ್ಸು, ಪರಿಚಯಾತ್ಮಕ ವಿವರ ಎಂಬ ವಿಷಯದ ಕುರಿತು ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು. ಭಿನ್ನ ತರಗತಿಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಕಾರ್ಯಗಾರಗಳ ಮೂಲಕ ಬೋಧಿಸಿದರೆ ಮಕ್ಕಳು ಅದನ್ನು ಬೇಗನೆ ಕಲಿತುಕೊಳ್ಳುತ್ತಾರೆ ಎಂದರು.

ಕನ್ನಡ ವಿಭಾಗದ ಶಿಕ್ಷಕಿ ಸುಪ್ರೀತಾ ಎ. ಮತ್ತು ಸ್ವಾತಿ ಕೆ.ವಿ. ವಿದ್ಯಾರ್ಥಿಗಳಿಗೆ ಛಂದಸ್ಸು, ಮಾತ್ರಗಣ ಹಾಗೂ ಕಂದ ಪದ್ಯಗಳ ಬಗ್ಗೆ ಚಟುವಟಿಕೆ ಮೂಲಕ ಕಾರ್ಯಗಾರವನ್ನು ನಡೆಸಿಕೊಟ್ಟರು.
ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here