ಬೆಳ್ತಂಗಡಿ: ಗ್ರಾಮಿಣ ಭಾಗದ ಶಾಲೆಯನ್ನು ಮುಚ್ಚುವುದರಿಂದ ಉಳಿಸಿದರು. ಗ್ರಾಮಸ್ಥರು, ಮಕ್ಕಳು ಮತ್ತು ಪೋಷಕರಿಂದ ಶ್ಲಾಘನೆ. ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ ಎಕೈಕ ಶಿಕ್ಷಕರು ಕಳೆದ ತಿಂಗಳು 28ನೇ ತಾರೀಕು ನಿವೃತ್ತರಾಗಿ ಶಾಲೆಯಲ್ಲಿ ಇದ್ದ ಓರ್ವ ಶಿಕ್ಷಕರು ಇಲ್ಲದೆ ಶಾಲೆ ಮುಚ್ಚುವು ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಾಲೆಯ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಅಶ್ವಮೇಧ ಫ್ರೆಂಡ್ಸ್ ಅಯೋಜನೆ ಮಾಡಿದ ವಾಲಿಬಾಲ್ ಪಂದ್ಯಾಟದ ವೇದಿಕೆಯಲ್ಲಿ ಶಾಲೆಯ ಶಿಕ್ಷಕರ ಕೊರತೆಯ ಬಗ್ಗೆ ಶಾಲೆಯ ಸಂಚಾಲಕರಾದ ವಾಮನ್ ತಾಮನ್ಕರ್ ಮತ್ತು ಧರ್ಮರಾಜ್ ಅಡಕ್ಕಾಡಿ ಈ ವಿಷಯವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರವರಿಗೆ ಹೇಳಿದರು.
ಹೇಗಾದರೂ ಮಾಡಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಿಸಿ, ಗ್ರಾಮಿಣ ಭಾಗದ ಶಾಲೆಗೆಯಾರು ಬರುವುದಿಲ್ಲ. ಸರ್ಕಾರ ಮೇಲೆ ಒತ್ತಡ ಹಾಕಿ ಇಲ್ಲದಿದರೆ ಶಾಲೆಯನ್ನು ಮುಚ್ಚುಬೇಕಾದೀತ್ತು ಎಂದು ತಿಳಿಸಿದ್ದರು. ಮರು ದಿನದಿಂದ ಕಾರ್ಯಪ್ರವೃತರಾದ ರಕ್ಷಿತ್ ಶಿವರಾಮ್ ತಾಲ್ಲೂಕಿನ ಶಿಕ್ಷಣ ಅಧಿಕಾರಿ, ಜಿಲ್ಲೆಯ ಮತ್ತು ರಾಜ್ಯ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿ ಶಾಲೆಗೆ ಶಿಕ್ಷಕರನ್ನು ನೇಮಿಸಿ, ಅವರು ಬಂದು ಶಾಲೆಯಲ್ಲಿ ಅಧಿಕಾರವಹಿಸುವ ತನಕ ಶ್ರಮಿಸಿದರು. ಇದರಿಂದ ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದರು.