ಕನ್ಯಾಡಿ: ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವರ್ಷಾವಧಿ ನಡ್ವಾಲ್ ಸಿರಿಜಾತ್ರಾ ಮಹೋತ್ಸವವು ಇದೇ ಬರುವ ಎ. 10ರಿಂದ 14ರವರೆಗೆ ವಿವಿಧ ವೈದಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ.
ಇದರ ಯಶಸ್ವಿಗಾಗಿ ಪೂರ್ವಭಾವಿ ಸಭೆಯು ಮಾ. 2ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ಜಾತ್ರಾ ಮಹೋತ್ಸವದ ಸಮಿತಿಯನ್ನು ರಚಿಸಲಾಯಿತು ಅಧ್ಯಕ್ಷರಾಗಿ ಪಾಂಡುರಂಗ ಮರಾಠೆ ಹಡೀಲು, ಕಾರ್ಯದರ್ಶಿಯಾಗಿ ಸದಾನಂದ ಪೂಜಾರಿ ಕೊಡೆಕ್ಕಲ್ ಆಯ್ಕೆಯಾದರು.
ಸಭೆಯಲ್ಲಿ ವಿವಿಧ ಸಮಿತಿಗಳಿಗೆ ಸಂಚಾಲಕರನ್ನು ನೇಮಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಚಂದ್ರಹಾಸ ಪಟವರ್ಧನ್, ಸಮಿತಿ ಸದಸ್ಯರುಗಳಾದ ಯಶೋಧರ ಗೌಡ ಕೊಡ್ಡೋಳು, ಪ್ರಸಾದ್ ಕುಮಾರ್, ನಾಗೇಶ್ ಎಂ. ಜಯನಗರ, ನಾಣ್ಯಪ್ಪ ಪೂಜಾರಿ ಹಾಗೂ ಊರವರದ ಅಶೋಕ್ ಪೂಜಾರಿ, ಅಜಿತ್ ಭಟ್ ಭಾರಧ್ವಾಜ್ ಸಾಧನ, ಗಣೇಶ್ ಶೆಟ್ಟಿ ಕೊಡ್ಡೋಲು, ಪ್ರಕಾಶ್ ಕುಮಾರ್, ವರುಣ್, ಕೊರಗಪ್ಪ ಪೂಜಾರಿ, ಆನಂದ ಎಸ್. ಡಿ., ಕೇಶವ ಎಮ್., ಜಯಾನಂದ, ಹರೀಶ್ ಗೌಡ, ಲಿಂಗಪ್ಪ ನಾಯ್ಕ, ಜಯಾನಂದ, ಸುರೇಶ್ ಆಂತ್ರಾಡಿ, ಬದ್ರಯ್ಯ ಪೂಜಾರಿ, ರಾಜೇಶ್ ಗೋಳಿದೊಟ್ಟು, ಸುಂದರ ಎಂ ಹಾಗೂ ಊರವರು ಉಪಸ್ಥಿತರಿದ್ದರು.