ಕೇಸರಿ ಗೆಳೆಯರ ಬಳಗ ನೇರೋಳ್‌ಪಲ್ಕೆ ವತಿಯಿಂದ 12ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

0

ಕನ್ಯಾಡಿ: ಕೇಸರಿ ಗೆಳೆಯರ ಬಳಗ ನೇರೋಳ್‌ಪಲ್ಕೆ ಮುರ ಇದರ ವತಿಯಿಂದ 12ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯು ಮಾ. 1ರಂದು ಸಂಜೆ ಗಂಟೆ 5-30ಕ್ಕೆ ನೇರೋಳ್‌ಪಲ್ಕೆ ಅಂಗನವಾಡಿ ವಠಾರದಲ್ಲಿ ನಡೆಯಲಿದೆ. ಸಂಜೆ ಗಂಟೆ 5-30ಕ್ಕೆ ಶ್ರೀ ಶನೀಶ್ವರ ಪೂಜೆ ಪ್ರಾರಂಭಗೊಂಡು ರಾತ್ರಿ ಗಂಟೆ 7-00ಕ್ಕೆ ಮಹಾಪೂಜೆ, ರಾತ್ರಿ ಗಂಟೆ 7-30ಕ್ಕೆ ಆಹ್ವಾನಿತ ತಂಡಗಳಿಂದ ಕುಣಿತ ಭಜನೆ, (ಸಂದೇಶ್‌ ಮದ್ದಡ್ಕ ಇವರ ನೇತೃತ್ವದಲ್ಲಿ) ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಭಜನಾ ಕಾರ್ಯಕ್ರಮ ಉದ್ಘಾಟನೆಯನ್ನು ಶಶಿಕರಣ್ ಜೈನ್, ನೋಟರಿ ವಕೀಲರು, ಬೆಳ್ತಂಗಡಿ ನೆರವೇರಿಸಲಿದ್ದಾರೆ. ಸಭಾ ಅಧ್ಯಕ್ಷತೆಯನ್ನು ವಿಶ್ವನಾಥ ಚೆನ್ನಳಿಕೆ, ಧಾರ್ಮಿಕ ಉಪನ್ಯಾಸ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಯುವ ಉದ್ಯಮಿ, ಬೆಂಗಳೂರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮುರಳೀಧರ ನಾಯ್ ಕೆ.ಜಿ., ಪೋಲೀಸ್ ಉಪನಿರೀಕ್ಷಕರು, ಬೆಳ್ತಂಗಡಿ ಪೋಲೀಸ್ ಠಾಣೆ, ರಂಜನ್ ಜಿ. ಗೌಡ ಅಧ್ಯಕ್ಷರು, ಕಾಳಭೈರವೇಶ್ವರ ಕ್ರೆಡಿಟ್ ಕೋ.ಬ್ಯಾಂಕ್‌, ಉಜಿರೆ, ಶಂಕರ್ ಹೆಚ್.ಒ.ಡಿ ವಾಣಿಜ್ಯ ವಿಭಾಗ ವಾಣಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ, ಪ್ರಶಾಂತ್, ಯುವ ಉದ್ಯಮಿ ಮೈಸೂರು, ವಿಪ್ಪೇಶ್ ಪ್ರಭು ಅಲಂದಡ್ಕ, ಆಶ್ರಯ ಅಜಿ ಮೂಡಬೆಟ್ಟು ಉಪಸ್ಥಿತರಿರುವರು. ಹಾಗೂ ರಾತ್ರಿ ಗಂಟೆ 9-30ರಿಂದ ಫಾಲ್ಕಾನ್ಸ್ ನೃತ್ಯ ತಂಡ ಬಿಜೈ ಮಂಗಳೂರು ಇವರಿಂದ ನೂತನ ನೃತ್ಯ ಪ್ರಕಾರಗಳ ಅನಾವರಣಗೊಳ್ಳಲಿದೆ.

LEAVE A REPLY

Please enter your comment!
Please enter your name here