ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ರಕ್ಷಿತ್ ಪಣಿಕ್ಕರ, ಉಪಾಧ್ಯಕ್ಷರಾಗಿ ಅಶೋಕ್ ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ನಾರಾಯಣ ಗೌಡ, ಉದಯ್ ಭಟ್, ಡೀಕಯ್ಯ ಗೌಡ, ರುಕ್ಮಯ್ಯ ಗೌಡ, ಪ್ರಸಾದ್ ಎ., ಉದಯ್ ಬಿ.ಕೆ., ಚಂದನ್ ಕುಮಾರ್, ದಿನೇಶ್ ನಾಯಕ್, ಶೀಲಾವತಿ, ಶಾರದಾ ಆರ್.ರೈ ಆಯ್ಕೆಯಾಗಿರುತ್ತಾರೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನ್ಂಗ್ ಅಧಿಕಾರಿ ಪ್ರತಿಮಾ ಬಿ. ನೆರವೇರಿಸಿದರು.