ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಉಪ್ಪಿನಂಗಡಿಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು, ಸುಳ್ಯ, ಬಂಟ್ವಾಳ ಹಾಗೂ ಉಪ್ಪಿನಂಗಡಿ ತಾಲ್ಲೂಕಿನ ಯೋಗ ಬಂಧುಗಳ ಸಾಮೂಹಿಕ ಯೋಗ ಶಿವನಮಸ್ಕಾರ ಮತ್ತು ಶಿವಾಷ್ಟೋತ್ತರ ಶತನಾಮಾವಳಿ ಪಠಣ ಹಾಗೂ ಅರ್ಚನೆಯ ಕಾರ್ಯಕ್ರಮವನ್ನು ಫೆ. 26ರಂದು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ದೇವಸ್ಥಾನದ ಕಾಳಿಕಾಂಬಾ ವೇದಿಕೆಯಲ್ಲಿ 4.45ರ ವೇಳೆಗೆ ಆರಂಭವಾದ ಕಾರ್ಯಕ್ರಮದ ಭಜನೆಯನ್ನು ಯೋಗಬಂಧುಗಳಾದ ಗಾಯತ್ರಿ, ಚಂದ್ರಾವತಿ ರೈ, ವಿಮಲಾ, ಪದ್ಮಾವತಿ, ಚಂದ್ರಾವತಿ, ಮೋಹಿನಿ ಹಾಗೂ ದಯಾನಂದ, ಅಮೃತ ವಚನ ವಾಚನವನ್ನು ಸುನೀತಾ ಹಾಗೂ ಪಂಚಾಗ ಪಠಣವನ್ನು ರಾಜೇಂದ್ರ ಭಟ್ ಅವರು ನಿರ್ವಹಿಸಿದರು.

ಮಾನಸಿಕ ಸಿದ್ಧತೆಯಿಂದ ಯೋಗ ಗಣಪತಿ ನಮಸ್ಕಾರದ ಅವಧಿಯಲ್ಲಿ ವಿವರಣೆಯನ್ನು ಶ್ರೀಯುತ ಆರ್ ಜೆ ಬಿರಾದಾರ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೇತ್ರಾವತಿ ವಲಯ ಶಿಕ್ಷಣ ಪ್ರಮುಖರು ಚೊಕ್ಕವಾಗಿ ನಿರ್ವಹಿಸಿದರೆ ಪ್ರಾತ್ಯಕ್ಷಿಕೆಯಲ್ಲಿ ಯೋಗಬಂಧುಗಳಾದ ಆಶಾ, ಸಂದೇಶ್, ಅನಿತಾ ಹಾಗೂ ನಾರಾಯಣ ಇವರು ಸಹಕರಿಸಿದರು.
ನಂತರ ಸಾಮೂಹಿಕ ಯೋಗ ಶಿವನಮಸ್ಕಾರದ ಆರಂಭಪೂರ್ವ ದೀಪ ಪ್ರಜ್ವಲನೆಯನ್ನು ಮಂಗಳಾರತಿಯ ಆರತಿಯನ್ನು ಬೆಳಗುವುದರೊಂದಿಗೆ ಮಧುಸೂಧನ ಕಲ್ಲೂರಾಯ, ಅರ್ಚಕರು, ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ಉಪ್ಪಿನಂಗಡಿ ಇವರು ನೆರವೇರಿಸಿದರು. ,ಶ್ರೀಯುತ ರವೀಶ್, ಪ್ರಾಂತ ಪ್ರಮುಖರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ರಾಧಾಕೃಷ್ಣ ನಾಯ್ಕ್, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ, ರವಿ ಬಿ. ಸ್., ವೃತ್ತನಿರೀಕ್ಷಕರು, ಉಪ್ಪಿನಂಗಡಿ, ಲೋಕೇಶ್ ಬೆತ್ತೋಡಿ, ಅಧ್ಯಕ್ಷರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಪುತ್ತೂರು ತಾಲ್ಲೂಕು, ಗೋಕುಲನಾಥ್, ನಿಕಟಪೂರ್ವ ಸಂಚಾಲಕರು, ನೇತ್ರಾವತಿ ವಲಯ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀಮತಿ ಗೀತಾ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕದ್ರಿ ಇದರ ಮಾರ್ಗದರ್ಶಕರು, ಆನಂದ, ಮಾರ್ಗದರ್ಶಕರು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಉಪ್ಪಿನಂಗಡಿ ತಾಲ್ಲೂಕು, ಸಂತೋಷ್ ಕುಮಾರ್, ಸಂಚಾಲಕರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಉಪ್ಪಿನಂಗಡಿ ತಾಲ್ಲೂಕು ಇವರುಗಳು ಜೊತೆಗೂಡಿ ನೆರವೇರಿಸಿದರು.

\ಉಪ್ಪಿನಂಗಡಿ, ಸಹಸ್ರಲಿಂಗೇಶ್ವರ ಶಾಖೆಯ ಯೋಗ ಶಿಕ್ಷಕರಾದ ಶ್ರೀಯುತ ಗೋವಿಂದ ಪ್ರಸಾದ ಅವರು ಬೌದ್ದಿಕ್ ನೀಡುತ್ತಾ ಕ್ಷೇತ್ರದ ಐತಿಹ್ಯವನ್ನು ವಿವರಿಸುವುದರ ಜೊತೆಗೆ ಉತ್ತಮವಾದ ಯೋಗ ಬಂಧುಗಳು ಹೇಗೆ ಸಂಸ್ಕಾರಯುತವಾದ ಬದುಕನ್ನು ಯೋಗದ ಜೊತೆಗೆ ಕಟ್ಟಬೇಕು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು.
4 ಆವೃತ್ತಿಗಳಲ್ಲಿ 11 ಬಾರಿ ಯೋಗ ಶಿವನಮಸ್ಕಾರವನ್ನು ನಡೆಸುವಾಗ ವಿವರಣೆಯಲ್ಲಿ ಶಿಕ್ಷಕರಾದ ಸತ್ಯಶಂಕರ, ಶಿವಣ್ಣ, ಶರ್ಮಿಳಾ ಹಾಗೂ ಮೋಹನ್ ನಿರ್ವಹಿಸಿದರೆ, ಪ್ರಾತ್ಯಕ್ಷಿಕೆಯಲ್ಲಿ ವಿಜೇತ, ಸಂಜೀವ, ಭಾರತೀ, ಗಂಗಾಧರ, ಸುಧಾ, ಮುತ್ತಪ್ಪ, ಕೋಮಲ, ವಿನಯ್, ಸುಂದರಿ, ಪದ್ಮನಾಭ, ಸೌಮ್ಯ, ಭುಜಂಗ, ಜಯಂತಿ, ಪ್ರೀತೇಶ್, ಶಶಿ ಮತ್ತು ಶಿವಪ್ರಸಾದ್ ಸಹಕರಿಸಿದರು.
ಅಗ್ನಿಹೋತ್ರವನ್ನು ಸಹಸ್ರಲಿಂಗೇಶ್ವರ ಶಾಖೆ, ಉಪ್ಪಿನಂಗಡಿಯ ಯೋಗ ಬಂಧು ರಾಜೇಂದ್ರ ಭಟ್ ದಂಪತಿಗಳು ನಡೆಸಿದರೆ, ಯೋಗ ಸಂಕಲ್ಪವನ್ನು ಹಾಗೂ ಶಿಕ್ಷಣದ ಮಾರ್ಗದರ್ಶನವನ್ನು ಶ್ರೀಯುತ ಪ್ರದೀಪ್ ಹಾಗೂ ಕೃಷ್ಣಪ್ಪ, ತಾಲ್ಲೂಕು ಶಿಕ್ಷಣ ಪ್ರಮುಖರು ನಿರ್ವಹಿಸಿದರು.
ಆರೋಗ್ಯಪೂರ್ಣ ವ್ಯಾಯಾಮಗಳ ನಂತರ ಬಳಲಿದ ದೇಹ ಹಾಗೂ ಮನಸ್ಸುಗಳನ್ನು ಬೆಸೆಯುವ ಶವಾಸನ /ಅಮೃತಾಸನವನ್ನು ತನ್ನ ಮಂತ್ರಮುಗ್ಧ ವಿವರಣೆಗಳ ಮೂಲಕ ಶ್ರೀಯುತ ರವೀಶ್, ಪ್ರಾಂತ ಪ್ರಮುಖರು (ಸೇವಾವಿಭಾಗ) ಅವರು ನಿರ್ವಹಿಸಿದರೆ ಪ್ರಾತ್ಯಕ್ಷಿಕೆಯಲ್ಲಿ ಚಂದ್ರಾವತಿ ರೈ, ಮೋಹನ್, ಶಶಿಕಲಾ ಮತ್ತು ಗಿರೀಶ್ ಅವರು ತೊಡಗಿಕೊಂಡರು.
ನಂತರ ನಡೆದ ಶಿವಾಷ್ಟೋತ್ತರ ಶತನಾಮಾವಳಿ ಮಂತ್ರ ಪಠಣವನ್ನು ಸಹಸ್ರಲಿಂಗೇಶ್ವರ ಶಾಖೆ, ಉಪ್ಪಿನಂಗಡಿಯ ಯೋಗ ಬಂಧುಗಳಾದ ವೀಣಾ, ರಾಜೇಂದ್ರ ಭಟ್ ದಂಪತಿಗಳು ಮತ್ತು ಗಾಣಿಗ ಭವನ ಶಾಖೆ, ರಾಮನಗರ, ಉಪ್ಪಿನಂಗಡಿಯ ಪುಟಾಣಿ ಯೋಗಬಂಧುಗಳು ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆಯನ್ನು ಕೊಯಿಲ ಸದಾಶಿವ ಶಾಖೆಯ ಯೋಗ ಶಿಕ್ಷಕರಾದ ಚೇತನ್ ಅವರು ಯತೋಚಿತವಾಗಿ ನಡೆಸಿದರೆ ಕಾರ್ಯಕ್ರಮದ ವಂದನಾರ್ಪಣೆಯನ್ನು ಮುರಳಿ ಮೋಹನ, ತಾಲ್ಲೂಕು ವರದಿ ಪ್ರಮುಖರು, ನಡೆಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು, ಸುಳ್ಯ, ಬಂಟ್ವಾಳ, ಉಪ್ಪಿನಂಗಡಿ ತಾಲ್ಲೂಕಿನ 225 ಯೋಗ ಬಂಧುಗಳು ಹಾಗೂ 135 ಯೋಗೇತರ ಬಂಧುಗಳು ಭಾಗವಹಿಸಿದ್ದರು. ಪ್ರಸಾದ ಸೇವನೆಯೊಂದಿಗೆ ಕೊನೆಗೊಂಡ ಕಾರ್ಯಕ್ರಮ 07.05ರ ವೇಳೆಗೆ ಸಂಪೂರ್ಣಗೊಂಡಿತು.