ಬಡಗಕಾರಂದೂರು: ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಬಳಿ ಹಿಂದೆ ಕಂಬಳ ನಡೆಯುತ್ತಿದ್ದ ಸ್ಥಳದಲ್ಲಿ ಅಗ್ನಿ ಅನಾಹುತ ಆಗಿ ಪರಿಸರದ ತೋಟಗಳಿಗೆ ಬೆಂಕಿ ಹತ್ತಿಕೊಂಡಾಗ ಅಗ್ನಿಶಾಮಕ ಠಾಣೆಗೆ ಕರೆ ಮಾಡಲಾಗಿದೆ.

ಆದರೆ ಅಗ್ನಿಶಾಮಕ ವಾಹನ ಬಂದಿರುವ ಯಾವುದೇ ಮಾಹಿತಿ ಇಲ್ಲ. ಸ್ಥಳೀಯ ಕೃಷಿ ಭೂಮಿಗೆ ಅಲ್ಪ ಹಾನಿಯಾಗಿದೆ.

ಊರಿನ ಯುವಕರು ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಶಿವಪ್ರಸಾದ್ ಅಜಿಲರು ಮೊಗೇರೊಡಿ ಕನ್ಸ್ಟ್ರಕ್ಷನ್ ರವರ ನೀರಿನ ಟ್ಯಾಂಕರ್ ಮೂಲಕ ಬೆಂಕಿ ಹಿಡಿದ ಎಲ್ಲ ಕಡೆಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಆಚಾರ್ಯ ರವರು ಸ್ವತಃ ಪೈಪ್ ಮುಖಾಂತರ ನೀರು ಹಿಡಿದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.