ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

0

ಕಳೆಂಜ: ಕಾಯರ್ತ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಉಮಾಮಹೇಶ್ವರ ದೇವರ ಜಾತ್ರಾ ಮಹೋತ್ಸವವು ಫೆ. 25 ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಮತ್ತು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ 47ನೇ ವರ್ಷದ ಮಹಾಶಿವರಾತ್ರಿಯ ಅರ್ಧ ಏಕಾಹ ಭಜನೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯು ಫೆ. 26ರಂದು ನಡೆಯಿತು.

ಫೆ. 25ರಂದು ಬೆಳಿಗ್ಗೆ ಗಣಹವನ, ನವಕ, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಉಪಹಾರ, ಜನಾರ್ದನ ಬೆಂಗಳೂರು ಇವರಿಂದ ಶಾಸ್ತ್ರಿಯ ಸಂಗೀತ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ತಾಯಾಂಬಿಕ, ರಾತ್ರಿ ರಂಗಪೂಜೆ, ಶ್ರೀದೇವರ ಭೂತ ಬಲಿ ಉತ್ಸವ, ಕಟ್ಟೆಪೂಜೆ, ಬೆಡಿಸೇವೆ, ನೃತ್ಯೋತ್ಸವ, ಅನ್ನಸಂತರ್ಪಣೆ, ವೈಷ್ಣವಿ ಶಿಶು ಮಂದಿರದ ಮತ್ತು ಬಾಲಗೋಕುಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಫೆ. 26ರಂದು ಬೆಳಿಗ್ಗೆ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ನಡೆಯಿತು.

ಅರ್ಚಕ ಗುರುರಾಜ ಶಬರಾಯ, ದೇವಸ್ಥಾನದ ಆಡಳಿತ ಮೊಕ್ತಸರರು ನೋಣಯ್ಯ ಗೌಡ ಎಲಿಮಾರು, ಅಧ್ಯಕ್ಷ ಆನಂದ ಗೌಡ ಮರಕ್ಕಡ, ಕಾರ್ಯದರ್ಶಿ ವಸಂತ ಗೌಡ ಮರಕ್ಕಡ, ಕೋಶಾಧಿಕಾರಿ ಶಿವಪ್ಪ ಗೌಡ ನೆಲ್ಲಿಕಟ್ಟೆ ಮತ್ತು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್, ಉಮಾಮಹೇಶ್ವರ ದೇವಸ್ಥಾನ ಮತ್ತು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಜೆ ಸತ್ಯನಾರಾಯಣ ಪೂಜೆ ಆರಂಭ, ಮಹಾಪೂಜೆ, ಜ್ಯೋತಿ ಬೆಳಗಿಸುವುದು, ಭಕ್ತಾದಿಗಳಿಂದ ಭಜನಾರಂಭ, ರಾತ್ರಿ ಆಹ್ವಾನಿತ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ಉಪಹಾರ ನಡೆಯಲಿರುವುದು.

ಫೆ. 27ರಂದು ಪ್ರಾತಃಕಾಲ ಏಕಾದಶ ರುದ್ರಾಭಿಷೇಕ, ಬೆಳಿಗ್ಗೆ ಮಹಾಮಂಗಳಾರತಿ, ನಡೆಯಲಿದೆ. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌, ಉಮಾಮಹೇಶ್ವರ ದೇವಸ್ಥಾನ ಮತ್ತು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here