ಕಕ್ಯಪದವು: ಎಲ್. ಸಿ. ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಷೇರು ಮಾರುಕಟ್ಟೆ ವಿಶ್ಲೇಷಣೆ” ಕುರಿತು ಮಾಹಿತಿ ಕಾರ್ಯಗಾರ

0

ಕಕ್ಯಪದವು: ಎಲ್. ಸಿ. ಆರ್ ಇಂಡಿಯನ್ ಪದವಿ ಕಾಲೇಜು ಇಲ್ಲಿನ ಬಿ. ಕಾಂ. ವಿಭಾಗದ ವಿದ್ಯಾರ್ಥಿಗಳಿಗೆ ಷೇರು ಮಾರುಕಟ್ಟೆಯ ಜ್ಞಾನವು ಹಣಕಾಸನ್ನು ಹೇಗೆ ನಿರ್ವಹಿಸುವುದು ಹಾಗೂ ಸುರಕ್ಷಿತ ಭವಿಷ್ಯಕ್ಕಾಗಿ ಉತ್ತಮ ಹಣಕಾಸಿನ ಹೂಡಿಕೆಯ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುವುದರ ಅರಿವು ಮೂಡಬೇಕು ಎಂಬ ನಿಟ್ಟಿನಲ್ಲಿ “ಷೇರು ಮಾರುಕಟ್ಟೆ ವಿಶ್ಲೇಷಣೆ” ಕುರಿತು ಮಾಹಿತಿ ಕಾರ್ಯಗಾರವು ಫೆ. 25ರಂದು ನಡೆಯಿತು.

ಈ ಕಾರ್ಯಗಾರವು 2 ಹಂತದಲ್ಲಿ ನಡೆಯಿತು. ಮೊದಲ ಹಂತದಲ್ಲಿ ಷೇರು ಮಾರುಕಟ್ಟೆ ಎಂದರೇನು ಮತ್ತು ಬಿ.ಎಸ್‌.ಇ ಮತ್ತು ಎನ್‌.ಎಸ್‌.ಇ ನ ಇತಿಹಾಸ, ಮೂಲಭೂತ ವಿಶ್ಲೇಷಣೆ ಮತ್ತು ತಾಂತ್ರಿಕ ವಿಶ್ಲೇಷಣೆಯನ್ನು ಒಳಗೊಂಡಿತ್ತು.

ಎರಡನೇಯ ಹಂತದಲ್ಲಿ ಪ್ರಾಯೋಗಿಕವಾಗಿ ಷೇರುಗಳನ್ನು ಹೇಗೆ ಖರೀದಿಸುವುದು, ಡಿಮೇಟ್ ಅಕಾಂಟ್, ಆರ್‌.ಎಸ್‌.ಐ ಮತ್ತು ಇತರ ತಾಂತ್ರಿಕ ಸಾಧನಗಳನ್ನು ಹೇಗೆ ತೆರೆಯುವುದು ಎಂಬುದನ್ನು ಒಳಗೊಂಡಿತ್ತು. ಸಂಸ್ಥೆಯ ಸಂಯೋಜಕ ಯಶವಂತ ಜಿ. ನಾಯಕ್ ಇವರು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.

ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ, ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಎ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ ಎ., ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಗಾರವು ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here