ಸ. ಪ್ರ. ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಹೂಡಿಕೆದಾರರ ಅರಿವು ಜಾಗೃತಿ ಕಾರ್ಯಗಾರ

0

ಬೆಳ್ತಂಗಡಿ: ಸ. ಪ್ರ. ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಮುಂಬೈನ ಫ್ರ್ಯಾಂಕ್ಲಿನ್ ಟೆಂಬಲ್ಟನ್ ಸಂಸ್ಥೆಯ ಸಹಯೋಗದೊಂದಿಗೆ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ಸಂಘ ಮತ್ತು ಯುವ ರೆಡ್ ಕ್ರಾಸ್ ಘಟಕ ಇವುಗಳ ಆಶ್ರಯದಲ್ಲಿ ಹಣಕಾಸಿನ ಹೂಡಿಕೆಯ ಬಗ್ಗೆ ಸಾಕ್ಷರತೆ ಹಾಗೂ ವಿವಿಧ ಹೂಡಿಕೆಗಳಲ್ಲಿ ಹಣಕಾಸಿನ ತೊಡಗಿಸಿವಿಕೆ ಬಗ್ಗೆ ಕಾರ್ಯಗಾರವನ್ನು ಏರ್ಪಡಿಸಲಾಯಿತು.

ಈ ಕಾರ್ಯಗಾರವನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪದ್ಮನಾಭ ಕೆ., ಉದ್ಘಾಟಿಸಿ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ಉಳಿತಾಯ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ಫ್ರಾಂಕ್ಲಿನ್ ಟೆಂಬಲ್ಟನ್ ಸಂಸ್ಥೆಯ ವ್ಯವಸ್ಥಾಪಕ ಲಿಯೋ ಅಮಲ್ ಸಣ್ಣ ಸಣ್ಣ ಉಳಿತಾಯಗಳಿಗೆ ಇರುವ ಬೇರೆ ಬೇರೆ ಹೂಡಿಕೆಗಳು ಮತ್ತು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಕಾರ್ಯಗಾರದ ಮುಖಾಂತರ ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುರೇಶ್ ವಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಗಾರದ ಸಂಯೋಜಕರು ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಧಿಕಾರಿ ಡಾ. ರವಿ ಎಂ ಎನ್., ಐ.ಕ್ಯು.ಎ.ಸಿ ಸಂಚಾಲಕ ಕುಶಾಲಪ್ಪ ಎಸ್., ಪ್ಲೇಸ್ಮೆಂಟ್ ಅಧಿಕಾರಿ ಕವಿತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಬಿ.ಎ ವಿದ್ಯಾರ್ಥಿನಿಯರು ಪ್ರಾರ್ಥಿಸುವುದರ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಯೋಜಕ ನವೀನ್ ಸ್ವಾಗತಿಸಿದರು. ದ್ವಿತೀಯ ಬಿ.ಕಾಂನ ರಕ್ಷಿತಾ ಹಾಗೂ ದ್ವಿತೀಯ ಬಿ.ಬಿ.ಎ ವೀಕ್ಷಿತ ಕಾರ್ಯಕ್ರಮ ನಿರೂಪಿಸಿದರು. ನಿರ್ವಹಣಾ ವಿಭಾಗದ ಮುಖ್ಯಸ್ಥ ರಶ್ಮಿ ಹೆಚ್. ಇವರು ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here