ಎಸ್. ಡಿ. ಎಂ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸುಖಿತಾ ಪಿ. ರವರಿಗೆ ಟೀಂ ಅಭಯಹಸ್ತ ವತಿಯಿಂದ ಗೌರವ, ಸನ್ಮಾನ

0

ಉಜಿರೆ: ಬ್ಯಾಚುಲರ್ ಆಫ್ ನ್ಯಾಚುರೋಪಥ್ ಆಂಡ್ ಯೋಗಿಕ್ ಸೈನ್ಸ್ ಸಂಸ್ಥೆಯ ವಿದ್ಯಾರ್ಥಿನಿ ಸುಖಿತಾ ಪಿ. ರವರು ತಮ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ಅಳದಂಗಡಿಯ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಯೋಗಾಸಕ್ತರ ಸಹಕಾರದೊಂದಿಗೆ ವಿವಿದೆಡೆ ಆಯೋಜಿಸಲ್ಪಟ್ಟಿದ್ದ ಯೋಗ ತರಬೇತಿ ಶಿಬಿರದ ತರಭೇತುದಾರರಾಗಿ ಭಾಗಿಯಾಗಿ ಯೋಗದ ಮಹತ್ವ ಹಾಗೂ ಆರೋಗ್ಯ ಸುರಕ್ಷತಾ ಕ್ರಮಗಳ ಮಾಹಿತಿ ನೀಡಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ, ಮುಂಬರುವ ದಿನಗಳಲ್ಲೂ ಯೋಗ ತರಬೇತಿಯನ್ನು ಅಪೇಕ್ಷಿಸಿ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ಗೌರವ ಸನ್ಮಾನವನ್ನು ಅರ್ಪಿಸಲಾಯಿತು.

ಸಂಘಟನೆಯ ಸಲಹೆಗಾರರಾದ ಉಮೇಶ್ ಸುವರ್ಣ, ಮಹಮ್ಮದ್ ಇಸಾಕ್, ಪ್ರಧಾನ ಸಂಚಾಲಕರಾದ ಸಂದೀಪ್ ಎಸ್. ನೀರಲ್ಕೆ ಅರ್ವ ರವರು ಗೌರವ ಪ್ರಧಾನ ಮಾಡಿದರು. ಸುಖಿತಾರವರ ತಂದೆ ಅಳದಂಗಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ತಾಯಿ ಮಮತಾ ಎಸ್. ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here