
ವೇಣೂರು: ಅಂಡಿಂಜೆ ಎಂಬಲ್ಲಿ 4 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಫೆ. 24ರಂದು ಸಂಜೆ ನಡೆದಿದೆ.
ಮೃತ ಬಾಲಕ ಅಂಡಿಂಜೆ ಗ್ರಾಮದ ನಿವಾಸಿ ದಿನೇಶ್ ಶರ್ಮ ಎಂಬವರ ಪುತ್ರ ಇಮಾಂಶು ಶರ್ಮ ಎಂದು ತಿಳಿದುಬಂದಿದೆ. ಅಂಡಿಂಜೆಯಲ್ಲಿ ವೇಣೂರು ನಾರಾವಿ ರಸ್ತೆಯಲ್ಲಿ ಬಂದ ಕೆ.ಎ 05 ಎನ್.ಎಲ್ 9644 ನಂಬರಿನ ಕಾರು ರಸ್ತೆ ದಾಟುವಾಗ ಬಾಲಕನಿಗೆ ಡಿಕ್ಕಿ ಹೊಡೆದಿದೆ.

ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಬಾಲಕನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಬಾಲಕ ಮೃತಪಟ್ಟಿದ್ದ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.