ಬೆಳ್ತಂಗಡಿ: ದಾರಿಗೆ ಅಡ್ಡ ಬಂದ ನಾಯಿ ಪ್ರಾಣ ಉಳಿಸಲು ಹೋದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರುನಿಂದ ಮಲ್ಪೆಗೆ ಹೋಗುವ ಪಿಕಪ್ ಅಳದಂಗಡಿಯ ಕೆದ್ದು ಬಳಿ ಫೆ.22ರಂದು ಈ ಘಟನೆ ನಡೆದಿದೆ. ಪಿಕಪ್ ನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.