ಉಜಿರೆ ಗುರು ಮಂದಿರ ನಿರ್ಮಾಣದ ಸಮಾಲೋಚನೆ ಸಭೆ

0

ಉಜಿರೆ: ಗುರು ನಾರಾಯಣ ಸ್ವಾಮಿ ಸೇವಾ ಸಂಘ ಉಜಿರೆ ಹಾಗೂ ಯುವ ವಾಹಿನಿ ಸಂಚಲನ ಸಮಿತಿ ಉಜಿರೆ ಇದರ ಜಂಟಿ ಸಹಯೋಗದೊಂದಿಗೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಮಂದಿರ ನಿರ್ಮಾಣದ ಬಗ್ಗೆ ಸಮಾಲೋಚನೆ ಸಭೆ ಉಜಿರೆ ಗ್ರಾಮದ ಇಚ್ಚಿಲ ಎಂಬಲ್ಲಿ ಫೆ. 2ರಂದು ನಡೆಯಿತು.

ಸಮಾಲೋಚನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಹಿರಿಯರಾದ ಜೈ ಶಂಕರ್, ಎಂ. ಶ್ರೀಧರ್ ಪೂಜಾರಿ ಕಲಾಯಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಗುರುನಾರಾಯಣಸ್ವಾಮಿ ಸೇವಾ ಸಂಘ ಉಜಿರೆ ಇದರ ಅಧ್ಯಕ್ಷ ಹರೀಶ್ ಬರೆಮೇಲು, ಯುವ ವಾಹಿನಿ ಸಂಚಲನ ಸಮಿತಿ ಉಜಿರೆ ಇದರ ಅಧ್ಯಕ್ಷ ರಿತೇಶ್ ರೆಂಜಾಳ, ಕೆ. ಕೆ. ಬ್ರದರ್ಸ್ ನ ಕಿರಣ್ ರೆಂಜಾಳ, ಬಿಜೋಯ್ ಅಶ್ವತಕಟ್ಟೆ ,ಮನೋಜ್ ಕುಂಜರ್ಪ, ಉಮೇಶ್ ಪೂಜಾರಿ ಅತ್ತಾಜೆ, ಸ್ಥಳ ದಾನಿ ಸಚ್ಚಿದನಂದ ಇಚ್ಚಿಲ ಉಪಸ್ಥಿತರಿದ್ದರು.

ಶ್ರೀ ಗುರು ನಾರಾಯಣ ಮಂದಿರ ಸೇವಾ ಸಮಿತಿ ಶಿವಗಿರಿ ಇಚ್ಚಿಲ ಉಜಿರೆ ಇದರ ನೂತನ ಸಮಿತಿಯನ್ನು ರಚಿಸಲಾಯಿತು, ಗೌರವ ಅಧ್ಯಕ್ಷರಾಗಿ ಶ್ರೀಧರ ಪೂಜಾರಿ ಕಲಯಿ ಜಯಶಂಕರ್ ಎಂ. ರೆಂಜಾಳ, ಅಧ್ಯಕ್ಷರಾಗಿ ರವಿ ಕುಮಾರ್ ಬರಮೆಲ್ , ಉಪಾಧ್ಯಕ್ಷರಾಗಿ ಕಿರಣ್ ರೆಂಜಾಳ ಕೆ. ಕೆ. ಬ್ರದರ್ಸ್ , ಬಿಜೋಯ್ ಅಶ್ವತಕಟ್ಟೆ, ತಾರಾನಾಥ ಬ್ರಹ್ಮಸ ಗುರಿಪಳ್ಳ, ದಿನೇಶ್ ಪೂಜಾರಿ ರಂಜಿತ್ ಮಣಿಕ್ಕೆ, ವಿನಿ ಕುಮಾರ್ ತಿಮರೋಡಿ, ಗುರು ಪ್ರಸಾದ್ ಪಾಲೆಂಜಾ, ಭಾರತಿ ಬ್ರಹ್ಮಸ ಗುರಿಪಳ್ಳ, ಪ್ರದಾನ ಕಾರ್ಯದರ್ಶಿಯಾಗಿ ಮನೋಜ್ ಕುಂಜರ್ಪ, ಜೊತೆ ಕಾರ್ಯದರ್ಶಿಯಾಗಿ ಸಚ್ಚಿದಾನಂದ ಇಚ್ಚಿಲ, ಕಿಶೋರ್ ಪೆರ್ಲ, ಯುವರಾಜ್ ಮಣಿಕ್ಕೆ, ಅಶೋಕ್ ಪೂಜಾರಿ ಪಾದೆ, ಸುರೇಶ್ ಪೂಜಾರಿ ಮಾಚಾರು, ,ಕೊಶಧಿಕಾರಿಯಾಗಿ ಹರೀಶ್ ಬರಮೆಲ್, ಪ್ರದಾನ ಸಂಚಾಲಕರಾಗಿ ಉಮೇಶ್ ಪೂಜಾರಿ ಅತ್ತಾಜೆ , ಹಾಗೂ ಸಹ ಸಂಚಾಲಕರು, ಬೂತುವಾರು ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಕಿಶೋರ್ ಪೆರ್ಲ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here