ಬೆಳಾಲು: ಗ್ರಾಮದ ಮಾಯ ಪರಿಸರದ ನಂಜದ ಕಾಡಿನ ಮಣ್ಣಿನಲ್ಲಿ ಮಲೆಚಾಮುಂಡಿ ಮತ್ತು ಗುಳಿಗ ದೈವಗಳ ನೂತನವಾಗಿ ನಿರ್ಮಿಸಿದ ದೈವದ ಕಟ್ಟೆಗಳ ಪ್ರತಿಷ್ಠೆಯು ಜ.19 ರಂದು ಊರಿನವರ ಸಮ್ಮುಖದಲ್ಲಿ ನಡೆಯಿತು.
600 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನದಲ್ಲಿ 60 ವರ್ಷಗಳ ನಂತರ ಕಾರ್ಯಕ್ರಮ ನಡೆದಿರುವುದು ವಿಶೇಷವಾಗಿದೆ. ದೈವದ ಭಂಡಾರವನ್ನು ಅಮುಂಜಿ ಮನೆಯಿಂದ ಬ್ಯಾಂಡ್, ಚೆಂಡೆ, ವಾದ್ಯದೊಂದಿಗೆ ವೈಭವದ ಮೆರವಣಿಗೆ ಮೂಲಕ ತಂದು ಸಮರ್ಪಿಸಲಾಯಿತು.
ಬೊಮ್ಮಗೌಡ ಆಮುಂಜಿ, ಬಾಲಕೃಷ್ಣ ಗೌಡ ಅಮುಂಜಿ ಇವರ ಮುಂದಾಳತ್ವದಲ್ಲಿ ನಡೆಯಿತು. ವಿಜಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಶಿವಕುಮಾರ್ ಬಾರಿತ್ತಾಯ ಪಾರಾಳ ಉಪಸ್ಥಿತಿಯಲ್ಲಿ ಪ್ರತಿಷ್ಠೆ ನೆನೆರವೇರಿಸಲಾಯಿತು. ಸಂಜೀವ ಗೌಡ ಅಮುಂಜಿ, ಉಷಾ ವೆಂಕಟರಮಣ ಕಿನ್ಯಾಜೆ, ವಸಂತ ಬಜಕ್ಕಳ, ಕೇಶವ ಗೌಡ ಮಾರ್ಪಾಲು, ಊರಿನ ಪ್ರಮುಖರು ಮತ್ತು ಊರಿನವರು ಉಪಸ್ಥಿತರಿದ್ದರು.