ನಿಡ್ಲೆ: ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮ ಸಭೆ ಬರೆಂಗಾಯ ಶಾಲೆಯ ಸಭಾ ಭವನದಲ್ಲಿ ಜ. 20ರಂದು ನಡೆಯಿತು. ನೊಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕು ಪಶು ಸಂಗೋಪನೆ ಇಲಾಖೆ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್, ದೂರ ದೃಷ್ಟಿ ಗ್ರಾಮಸಭೆ ಮಾರ್ಗದರ್ಶನಧಿಕಾರಿಯಾಗಿ ಜಗದೀಪ್, ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಸುಹಾಸ್, ಕಂದಾಯ ಇಲಾಖೆಯಿಂದ ಗ್ರಾಮ ಲೆಕ್ಕಿಗ ಪೃಥ್ವಿ ರಾಜ್, ಅರೋಗ್ಯ ಇಲಾಖೆಯಿಂದ ತುಷಾರಾ, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅನ್ನಪೂರ್ಣ, ಶಿಕ್ಷಣ ಇಲಾಖೆಯ ಪ್ರತಿಮಾ, ಸಮಾಜ ಕಲ್ಯಾಣ ಇಲಾಖೆಯಿಂದ ಹೇಮಾವತಿ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ., ಪಂಚಾಯತ್ ನಿಕಟ ಪೂರ್ವಧ್ಯಕ್ಷ ಪ್ರವೀಣ್ ಹೆಬ್ಬಾರ್, ಕಾರ್ಯದರ್ಶಿ ಕೆ. ಪಿ. ಕೇಶವ ಗೌಡ ಶಿಬಾಜೆ ಮತ್ತು ಪಂಚಾಯತ್ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸ್ವಾಗತವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ., ನಿರೂಪನೆ ಮತ್ತು ಜಮಾಖರ್ಚಿನ ವಿವರವನ್ನು ಕಾರ್ಯದರ್ಶಿ ಕೆ. ಪಿ. ಕೇಶವ ಗೌಡ, ಧನ್ಯವಾದವನ್ನು ಪಂಚಾಯತ್ ಸದಸ್ಯೆ ಹೇಮಾವತಿ ನೆರವೇರಿಸಿದರು.