

ಮಡಂತ್ಯಾರು: ಜೆ. ಸಿ. ಐ 2024 ರ ಶಾಶ್ವತ ಯೋಜನೆಗಳಾದ ಶಿಶು ವಿಹಾರದ ಇಂಟರ್ಲಾಕ್ ಅಳವಡಿಕೆ ಮತ್ತು ಜೆ. ಸಿ ವೃತ್ತದ ನವೀಕರಣದ ಅನಾವರಣ ಕಾರ್ಯಕ್ರಮವು ಜ. 14 ರಂದು ನೆರವೇರಿತು. ಮುಖ್ಯ ಆತಿಥಿಗಳಾಗಿ ಪೂರ್ವಾದ್ಯಕ್ಷ ಜೆ. ಸಿ ಪ್ರವೀಣ್ ಕುಮಾರ್ ದೋಟ, ನಿಕಟ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆ. ಸಿ. ಐ ಪಿ. ಪಿ. ಪಿ ಕಾರ್ತಿಕೇಯ ಮಧ್ಯಸ್ಥ, ಗೌರವ ಅತಿಥಿಗಳಾಗಿ ವಲಯಾಧ್ಯಕ್ಷರು ಜೆ. ಸಿ. ಐ ಸೆಂಟರ್ ಅಭಿಲಾಷ್ ಬಿ. ಎ., ವಲಯ ಉಪಾಧ್ಯಕ್ಷ ಜೆ. ಎಫ್. ಎಮ್ ರಂಜಿತ್ ಎಚ್., ಶಿಶುವಿಹಾರ ಮಹಿಳಾ ಮಂಡಲ ಮಡಂತ್ಯಾರು ಅಧ್ಯಕ್ಷೆ ಲೂಸಿ ಕಾರ್ಲೊ ರವರಿಂದ ನಡೆಯಿತು.
ಘಟಕಾಧ್ಯಕ್ಷ ಜೇ.ಸಿ ವಿಕೇಶ್ ಮಾನ್ಯ, ವಲಯ ನಿರ್ದೇಶಕ ಜೇ.ಸಿ ಅಶೋಕ್ ಗುಂಡಿಯಲ್ಕೆ, ನಿಯೋಜಿತ ಅಧ್ಯಕ್ಷ ಜೇಸಿ ಅಮಿತಾ ಅಶೋಕ್, ಕಾರ್ಯದರ್ಶಿ ಜೇಸಿ ಸಂಯುಕ್ತ್ ಪೂಜಾರಿ, ನಿಯೋಜಿತ ಕಾರ್ಯದರ್ಶಿ ಜೇಸಿ ಆದರ್ಶ್ ಹಟ್ಟತ್ತೋಡಿ, ಮಹಿಳಾ ಮಂಡಲದ ಸದಸ್ಯ ರೋಹಿಣಿ ಪಕಳ, ಸವಿತ, ಚಂದ್ರಕಲಾ, ಜೇಸಿ ಘಟಕದ ಸದಸ್ಯರಾದ ಜೇಸಿ ಯತೀಶ್ ರೈ, ಜೇಸಿ ಮನೋಜ್ ಮೈಲೋಡಿ, ಜೇಸಿ ಸಾಯಿಸುಮ ಎಂ. ನಾವಡ, ಜೇಸಿ ತೃಪ್ತಿ ವಿಕೇಶ್, ಬೆಳ್ತಂಗಡಿ ಮಂಜುಶ್ರೀ ನಿಕಟ ಪೂರ್ವ ಮಹಿಳಾ ಸಂಯೋಜಕಿ ಜೇಸಿ ಶ್ರುತಿ ರಂಜಿತ್ ಹಾಗೂ ಇತರರು ಉಪಸ್ಥಿತರಿದ್ದರು.