ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ – ಧಾರ್ಮಿಕ ಸಭೆ – ಸಾಧಕರಿಗೆ ಸನ್ಮಾನ

0

p>

ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಜ. 14 ರಿಂದ 18 ರವರೆಗೆ ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್‌ ಉಳಿಯಬೀಡು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್ ಆಗಮಿಸಿದರು. ವೇದಿಕೆಯಲ್ಲಿ ಪಟ್ರಮೆ ಗ್ರಾ. ಪಂ. ಅಧ್ಯಕ್ಷ ಮನೋಜ್, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ರುಕ್ಷ್ಮಯ್ಯ ಗೌಡ ಪದಳ, ಕಾರ್ಯದರ್ಶಿ ಆನಂದ ಗೌಡ ಕಲ್ಕುಡಂಗೆ, ಸೇವಾ ಸಮಿತಿ ಅಧ್ಯಕ್ಷ ಹರೀಶ್‌ ಗೌಡ ಅಪ್ರೋಡಿ, ಕಾರ್ಯದರ್ಶಿ ಶರತ್ಚಂದ್ರ ಹಿರ್ತಡ್ಕ ಹಾಗೂ ಜಾತ್ರೋತ್ಸವ ಸಮಿತಿ, ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಧರ್ಮಸ್ಥಳ ಕಲ್ಲೇರಿ ಶ್ರೀ ಸಿದ್ದಿವಿನಾಯಕ ಸ್ಟೋರ್ ಉದ್ಯಮಿ ರತ್ನಾಕರ ಪ್ರಭು, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಬಿ. ಸೀತಾರಾಮ ತೋಳ್ಳಾಡಿತ್ತಾಯ ಧರ್ಮಸ್ಥಳ, ಹಿರಿಯ ಯಕ್ಷಗಾನ ಕಲಾವಿದ ನರೇಂದ್ರ ಕುಮಾ‌ರ್ ಉಜಿರೆ ಸನ್ಮಾನಿಸಲಾಯಿತು. ಹಾಗೂ ತಾಳಮದ್ದಳೆಯ ಹಿರಿಯ ಅರ್ಥಧಾರಿ ಮತ್ತು ಕೃಷಿಕ ಸೂರ್ಯನಾರಾಯಣ ಶರ್ಮ ಎಲಿಕಳರವರಿಗೆ ಯಕ್ಷ ಭಾರತಿ ದಶಕ ಸಂಭ್ರಮದ ಸೇವಾ ಗೌರವ ನೀಡಿ ಸನ್ಮಾನಿಸಲಾಯಿತು.

ಭವ್ಯ ಕಾಯಿಲ ಪ್ರಾರ್ಥಿಸಿದರು. ಸುಧಾಶ್ರೀ ಕೆಮನೋಡಿ ಸ್ವಾಗತಿಸಿ, ಧರ್ಮಸ್ಥಳ ಗ್ರಾ. ಪಂ. ಉಪಾಧ್ಯಕ್ಷ ಶ್ರೀನಿವಾಸ್‌ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು. ರುಕ್ಮಯ್ಯ ನೆಕ್ಕಿಲು ಧನ್ಯವಾದವಿತ್ತರು. ರಾತ್ರಿ ಪ್ರಸಿದ್ಧ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಿತು.

LEAVE A REPLY

Please enter your comment!
Please enter your name here