ಹತ್ಯಡ್ಕ: ಸೇವಾಭಾರತಿ ಕನ್ಯಾಡಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ-ಶಿಶಿಲ ಸಹಭಾಗಿತ್ವದೊಂದಿಗೆ ಮಹಿಳೆಯರಿಗಾಗಿ 30ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಅರಸಿನಮಕ್ಕಿ ಅಂಗನವಾಡಿ ಕೇಂದ್ರ ನಾವಳೆ- ಪಾಲೆಂಜದಲ್ಲಿ ಜ. 14 ರಂದು ನಡೆಯಿತು.
ಅರಸಿನಮಕ್ಕಿ ಸಮಾಜ ಸೇವಕ ಧರ್ಮರಾಜ ಗೌಡ ಅಡ್ಕಾಡಿ ಮಹಿಳೆಯರು ತನ್ನ ಕಾಲ ಮೇಲೆ ನಿಂತುಕೊಂಡು ಸ್ವಾಲಂಭಿಯಾಗಿ ಬದುಕು ನಡೆಸಬೇಕೆಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿ. ಇ. ಒ ಸ್ವರ್ಣಗೌರಿ ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ – ಉದ್ಯೋಗದ ಅವಕಾಶವಿರುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯವೆಂದು ತಿಳಿಸಿದರು.
ಅರಿಕೆಗುಡ್ಡೆ ಜೀರ್ಣೋದ್ಧಾರ ಸಮಿತಿ ಶ್ರೀ ವನದುರ್ಗ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಪಿಲಿಕಬೆ, ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಾಜಿ ಅಧ್ಯಕ್ಷರು ಹಾಗೂ ನೂತನ ಹಾಲಿ ಸದಸ್ಯ ರಾಘವೇಂದ್ರ ನಾಯಕ್ ಬರ್ಗುಳ, ಅರಸಿನಮಕ್ಕಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಜಯಪ್ರಸಾದ್ ಶೆಟ್ಟಿಗಾರ್, ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಶಾಂತ ಪಿ. ಶೆಟ್ಟಿ, ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಮಹಿಳಾ ಕಾರ್ಯದರ್ಶಿ ನೀತಾ ರಾಧೇಶ್ ಆಚಾರ್ಯ, ನಾವಳೆ- ಪಾಲೆಂಜ ಬಾಲವಿಕಾಸ ಕೇಂದ್ರದ ಅಧ್ಯಕ್ಷೆ ಕೇಶಾವತಿ, ನಾವಳೆ ಟೈಲರಿಂಗ್ ತರಬೇತಿದಾರರು ವಿಮಲ ಆರ್. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 23 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪೂರ್ಣಿಮಾ ಸ್ವಾಗತಿಸಿ, ಸೇವಾಭಾರತಿಯ ಡಾಕ್ಯುಮೆಂಟೇಶನ್ ಮೋನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ, ನಮಿತಾ ಧನ್ಯವಾದವಿತ್ತರು.