ಬೆಳ್ತಂಗಡಿ: ಬಂಗೇರ ಬಿಗ್ರೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ, ಬಿನುತಾ ಬಂಗೇರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ
ಮಾಜಿ ಶಾಸಕ ಬೆಳ್ತಂಗಡಿಯ ಅಭಿವೃದ್ಧಿ ಹರಿಕಾರರೂ ಕೀರ್ತಿಶೇಷ ಕೆ. ವಸಂತ ಬಂಗೇರರವರ 79 ನೇ ಹುಟ್ಟುಹಬ್ಬದ ಪ್ರಯುಕ್ತ
ಜ. 15 ರಂದು ಮದ್ದಡ್ಕ ಬಂಡಿಮಠ ಮೈದಾನದಲ್ಲಿ
ಹೊನಲು ಬೆಳಕಿನ ಪುರುಷರ ಮುಕ್ತ ಹಾಗೂ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಬಾಟಕಿಯರ
ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಬಂಗೇರ ಬಿಗ್ರೇಡ್ ಗೌರವಾಧ್ಯಕ್ಷೆ ಬಂಗೇರರ ಹಿರಿಯ ಪುತ್ರಿ ಪ್ರೀತಿತಾ ಬಂಗೇರ ಹೇಳಿದರು.
ಅವರು ಜ. 8 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.
ಅಂದು ಬೆಳಿಗ್ಗೆ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ ಬಾಲಕಿಯಾರಿಗೆ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸಂಜೆ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ. ಇದರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜೀತಾ ವಿ. ಬಂಗೇರ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಸಭಾ ಅಧ್ಯಕ್ಷ ಯು. ಟಿ. ಖಾದರ್, ಬೆಳಾಲು ಅರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್
ಆರಿಕೋಡಿ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪುರುಷರ ಮುಕ್ತ ವಿಭಾಗಕ್ಕೆ
ಪ್ರಥಮ : ರೂ. 30,000/-
ದ್ವಿತೀಯ: ರೂ. 20,000/-
ತೃತಿಯ ಮತ್ತು ಚತುರ್ಥ ತಲಾ ರೂ. 10,000/- ನಗದು ಮತ್ತು ಎಲ್ಲಾ ವಿಜೇತ ತಂಡಕ್ಕೆ ಬಂಗೇರ ಬ್ರಿಗೇಡ್ ಟ್ರೋಫಿ, ಪ್ರೌಢ ಕಾಲಾ ಬಾಲಕ-ಬಾಲಕಿಯರ ವಿಭಾಗಕ್ಕೆ ,ಪ್ರಥಮ ರೂ. 10,000/-ದ್ವಿತೀಯ ರೂ. 7,000- ತೃತೀಯ ಮತ್ತು ಚತುರ್ಥ ರೂ. 5,000/-ನಗದು ಮತ್ತು ಬಂಗೇರ ಬಿಗ್ರೇ ಡ್ ಟ್ರೋಫಿ,
ಹಾಗೂ ಬೆಸ್ಟ್ ರೈಡರ್,ಬೆಸ್ಟ್ ಕ್ಯಾಚರ್ ಆಲ್ ರೌಂಡರ್ ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಹಿಸಲಾಗುವುದು.
ಆಟಗಾರರಿಗೆ ಮತ್ತು ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬಂಗೇರರ ದ್ವಿತೀಯ ಪುತ್ರಿ ಬಂಗೇರ ಬಿಗ್ರೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಬಂಗೇರ ಮೊಮ್ಮಗ ವೇದಾಂತ್, ಬಂಗೇರ ಬಿಗ್ರೇಡ್ ಸದಸ್ಯರಾದ ರಾಜಶ್ರೀ ರಮಣ್, ಅನೂಪ್ ಜೆ. ಬಂಗೇರ, ರಾಕೇಶ್ ಮೂಡುಕೋಡಿ, ಸಲೀಂ ಗುರುವಾಯನಕೆರೆ ಉಪಸ್ಥಿತರಿದ್ದರು
ಬಂಗೇರ ಬ್ರಿಗೇಡ್ ಬೆಳ್ತಂಗಡಿ