ಗುಂಡೂರಿ: ಶ್ರೀ ಗುರು ಚೈತನ್ಯ ಸೇವಾಶ್ರಮ ನಿವಾಸಿಗಳ ಸಮ್ಮುಖದಲ್ಲಿ ಶ್ರೀ ಗುರುಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಡಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗೆ ಅಭಿನಂದನಾ ಕಾರ್ಯಕ್ರಮವು ಡಿ. 15 ರಂದು ನೆರವೇರಿತು.
ಸಂಸ್ಥೆಯ ಪರವಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೂಡಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್ ಯುವರಾಜ್ ಜೈನ್ ಯಾವುದೇ ಕೆಲಸ ಕಾರ್ಯವೇ ಸರಿ, ಮಾಡುವ ಕೆಲಸದಲ್ಲಿ ಶ್ರದ್ದೆ, ಭಕ್ತಿ, ನಿಷ್ಠೆ ಇದ್ದಲ್ಲಿ ವ್ಯಕ್ತಿ ಗುರಿ ಮುಟ್ಟಿ ಸಮಾಜಕ್ಕೆ ಬೆಳಕಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟು ಸೇವಾಶ್ರಮದ ಪುಣ್ಯ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮಾತನಾಡಿ ನಮ್ಮ ಪರಿಸರದಲ್ಲಿ ನಮಗೆ ಕಲಿಸಲಾಗದಂತಹ ಅದೆಷ್ಟೋ ಪಾಠಗಳಿವೆ, ಅವುಗಳನ್ನು ನಾವು ಹುಡುಕಬೇಕಷ್ಟೇ ಉದಾಹರಣೆಗೆ ಈ ಶ್ರೀ ಗುರು ಚೈತನ್ಯ ಸೇವಾಶ್ರಮ, ಇಲ್ಲಿ ವಾಸಿಸುವ ಆಶ್ರಮವಾಸಿಗಳ ಕಳೆದ ತೆರೆಯ ಮೆರೆಯ ಜೀವನ ಕಥೆಗಳು ಯುವ ಪೀಳಿಗೆಗೆ ಜೀವನ ಪಾಠ. ಇಂತಹ ಮನುಕುಲದ ಸೇವೆಮಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರಯತ್ನಪಡುವ ಸೇವಾಶ್ರಮದ ಮುಖ್ಯಸ್ಥ ಹೊನ್ನಯ್ಯ ಸಮಾಜ ಸೇವಕರ ಸಾಲಿನಲ್ಲಿ ಉದಾಹರಣೆಯಾಗುತ್ತಾರೆ ಎಂದರು.
ಮೂಡುಬಿದಿರೆಯ ಎಕ್ಸಲೆಂಟ್ ಪಿ. ಯು ಕಾಲೇಜಿನ ಆರ್ಮಿ ವಿಂಗ್ ಎನ್. ಸಿ. ಸಿ ನ ಆಪೀಸರ್ ಲೆಫ್ಟಿನೆಂಟ್ ಮಹೇಂದ್ರ ಜೈನ್ ಅವರ ಮಾರ್ಗದರ್ಶನದಲ್ಲಿ ತನ್ನ ಎನ್. ಸಿ. ಸಿ ಕ್ರೆಡೆಸ್ಟ್ ನವರಿಂದ ಆಶ್ರಮವಾಸಿಗಳಿಗೆ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎನ್. ಸಿ. ಸಿ ಕ್ರೆಡೆಸ್ಟ್ ಸೇವಾಶ್ರಮಕ್ಕೆ ಅಗತ್ಯ ಸಾಮಾಗ್ರಿಗಳ ಹಾಗೂ ತಿಂಗಳಿಗೆ ಬೇಕಾಗುವ ಜೀನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ಸೇವಾಶ್ರಮದ ಆಪ್ತಬಂಧು ಹೊನ್ನಯ್ಯ ಮಾತನಾಡಿ
ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆ ಜಿಲ್ಲಾಡಳಿತದಿಂದ ಸ್ವೀಕರಿಸಿದ 2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ ಅಭಿನಂದನೆ ಸಲ್ಲಿಸಿದರು.
ಸೌಜನ್ಯ ಸಜ್ಜನ್ ಜೈನ್, ರೇಣುಕಾ, ರಂಜಿತ್ ನಡ್ತಿಕಲ್, ಮತ್ತಿತ್ತರು ಉಪಸ್ಥಿತರಿದ್ದರು. ಕ್ಷಿತಿಕ್ಷಾ ಸ್ವಾಗತಿಸಿ ವಂದಿಸಿದರು.