p>
ಉಜಿರೆ: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಸಹಾಯಕ ಸಂಶೋಧಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಭ್ಯಾ ಹೆಬ್ಬಾರ್ ಪಿ. ಎಚ್. ಡಿ ಪದವಿ ಗಳಿಸಿದ್ದಾರೆ.
‘ಇನ್ವೆಸ್ಟಿಗೇಷನ್ ಆಫ್ ಕೊಡೋಪೆಡ್ ಹಫ್ನಿಯಾ ಥಿನ್ ಫಿಲಂಸ್ ಫಾರ್ ಡಿವೈಸ್ ಅಪ್ಲಿಕೇಶನ್’ ಎಂಬ ವಿಷಯದಲ್ಲಿ ಅವರು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೂಲಕ ಇಲ್ಲಿನ ಮೋಹನ್ ರಾವ್ ಕೆ.ರವರ ನಿರ್ದೇಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ಉಜಿರೆಯ ಸಂಪಿಗೆ ನಗರದ ನಿವಾಸಿ ಸುರೇಶ ಹೆಬ್ಬಾರ್ ಮತ್ತು ಸ್ನೇಹಾ ಹೆಬ್ಬಾರ್ ದಂಪತಿಯ ಪುತ್ರಿ.
p>