p>
ನೆರಿಯ: ಮುಖ್ಯ ರಸ್ತೆಯ ಇಟ್ಟಾಡಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಡಿ.10 ರಂದು ನಡೆಯಿತು. ಘಟನೆಯಿಂದ ಚಾಲಕ ಸೇರಿ ಮೂರು ಮಂದಿ ಸಣ್ಣ ಪುಟ್ಟ ಗಾಯದಿಂದ ಜೀವ ಅಪಾಯದಿಂದ ಪಾರು ಆಗಿದ್ದಾರೆ. ತೋಟತ್ತಾಡಿ ಚರ್ಚ್ ನಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉದನೆಯಿಂದ ತೋಟತ್ತಾಡಿಗೆ ಬರುವ ವೇಳೆಯಲ್ಲಿ ಘಟನೆ ಸಂಭವಿಸಿದೆ.