ಕುತ್ಲೂರು: ಶ್ರೀ ದೇವಿ ಕೃಪಾದಲ್ಲಿ ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ

0

p>

ಕುತ್ಲೂರು: ಶ್ರೀ ದೇವಿ ಕೃಪಾದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯರಿಗೆ ಅಡಿಕೆಬೆಳೆ ಕೊಳೆರೋಗ ನಿಯಂತ್ರಿಸುವ ಬಗ್ಗೆ ಎಲೆಚುಕ್ಕಿ ರೋಗದ ಬಗ್ಗೆ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

WCS ಸಂಸ್ಥೆಯ ಕ್ಷೇತ್ರಾಧಿಕಾರಿ ಕೆ. ರಾಮಚಂದ್ರಭಟ್ ಎಲ್ಲರನ್ನುಸ್ವಾಗತಿಸಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖಾಂತರ ಉಚಿತವಾಗಿ ಹತ್ತು ಫಲನುಭವಿಗಳಿಗೆ ವಾಹನ ಚಾಲನ ತರಬೇತಿ ಕೊಡಿಸಿ ವಾಹನ ಚಾಲನ ಪರವಾನಿಗೆ ವಿತರಿಸಲಾಯಿತು. ಆಯ್ದ ಫಲನುಭವಿಗಳಿಗೆ ಎರಡು ಸಾವಿರ ಅಡಿಕೆ ಗಿಡ, ತೆಂಗಿನ ಗಿಡ, ನೂರು ಐನೂರು ಕೊಕೊ ಗಿಡಗಳನ್ನು ಉಚಿತವಾಗಿ ನೀಡಲಾಯಿತು.

ಅಡಿಕೆ ಬೆಳೆಗಳಿಗೆ ತಗಲುವ ರೋಗಗಳ ಮತ್ತು ಅದರ ನಿಯಂತ್ರಿಸುವ ಮಾಹಿತಿ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆಲ್ಲ ಪ್ರಗತಿಪರ ಕೃಷಿಕರಾದ ಶೈಲೇಂದ್ರ ಮರಾಠೆ ಈದು ಮಾಹಿತಿ ನೀಡಿದರು. ವೇಣೂರಿನ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ನಿರಂಜನ ವಾಹನ ಚಾಲನ ಬಗ್ಗೆಲ್ಲ ವಿವರಿಸಿದರು. ಸುಮಾರು ಎಂಬತ್ತು ರೈತರು ಭಾಗವಹಿಸಿದ್ದರು. ಪ್ರಮಿಳಾ ಆರ್. ಭಟ್ ಎಲ್ಲರಿಗೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here