ಗುರುವಾಯನಕೆರೆ: ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಡಿ. 7 ರಿಂದ ಹೊಸ ಆಡಳಿತದೊಂದಿಗೆ ಪ್ರಖ್ಯಾತ ಹೋಟೆಲ್ ಉದ್ಯಮಿ ಬೆಳ್ತಂಗಡಿಯ ಜೋರ್ಡನ್ ಫ್ಯಾಮಿಲಿ ರೆಸ್ಟೋರೆಂಟ್ ನ ನಿರ್ವಹಣಾ ತಂಡದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ವಿಶಿಷ್ಟ ಅನುಭವವನ್ನು ನೀಡಲು ಸಜ್ಜಾಗಿದೆ. ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಯಶಸ್ಸು ಸಾಧಿಸಿರುವ ಈ ಹೊಸ ನಿರ್ವಹಣೆ, ಆಹಾರಪ್ರಿಯರಿಗೆ ವಿಶೇಷ ರುಚಿಗಳ ಸಂಭ್ರಮವನ್ನು ನೀಡುವ ಪ್ರಸಿದ್ಧ ತಾಣವಾಗುವ ಭರವಸೆ ನೀಡುತ್ತದೆ.
ಇದರ ಉದ್ಘಾಟನೆ ಮತ್ತು ಆಶೀರ್ವಚನವನ್ನು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಪ್ರಧಾನ ಧರ್ಮಗುರು ವಂ. ಫಾ. ವಾಲ್ಟರ್ ಡಿಮೆಲ್ಲೊ ನೆರವೇರಿಸಿದರು. ಸಿ. ವಿ. ಸಿ ಸಂಸ್ಥೆಯ ಜೇಮ್ಸ್ ಡಿಸೋಜಾ, ಅಲ್ಫೋನ್ಸ್ ಡಿಸೋಜಾ, ಬೆಳ್ತಂಗಡಿ ಕ್ಯಾಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೊ, ಗೋಕುಲ್ ದಾಸ್ ಭಂಡಾರ್ಕರ್, ವಿಜಯ್ ಡಿಕುನ್ಹಾ, ಉಜಿರೆ ಲಕ್ಷ್ಮೀ ಗ್ರೂಪ್ಸ್ ನ ಮೋಹನ್ ಕುಮಾರ್, ಜೈಸಾನ್ ಡಿಸೋಜಾ, ಅಶ್ವಿನಿ ಡಿಸೋಜಾ, ಹೆರಿಕ್ ಡಿಸೋಜಾ, ಫ್ರಾಂಕಿ ಡಿಸೋಜಾ, ಪೌಲಿನ್ ರೇಗೊ, ಜೆರಾಲ್ಡ್ ಕೊರೆಯ, ಜೆಸಿಂತಾ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು. ವಿನ್ಸೆಂಟ್ ಮೊರಾಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.