ಇಂದಬೆಟ್ಟು: 24 ಜಿಲ್ಲೆಯ ಪ್ರತಿಷ್ಠಿತ ಬಂಗಾಡಿ ಸಿ.ಎ ಬ್ಯಾಂಕ್ ಚುನಾವಣೆಗೆ ದಿಕ್ಸೂಚಿ ಎಂದೇ ಪ್ರಸಿದ್ಧಿ ಪಡೆದ ಇಂದಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಇದರ ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ (ಬಿಜೆಪಿ) ಬೆಂಬಲಿತ 11 ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲ್ಲುವ ಮೂಲಕ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಈ ಚುನಾವಣೆಯು ಡಿಸೆಂಬರ್ 8 ರಂದು ನಡೆಯಲಿರುವ ಜಿಲ್ಲೆಯ ಪ್ರತಿಷ್ಠಿತ ಬಂಗಾಡಿ ಸಿ.ಎ ಬ್ಯಾಂಕ್ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಲ್ಪಡುವ ಚುನಾವಣೆ ಯಾಗಿದ್ದು ಬಿಜೆಪಿ ಬೆಂಬಲಿತರು ಪ್ರಚಂಡ ಬಹುಮತದಿಂದ ಗೆದ್ದು ಬೀಗಿದರೆ ಸತತ 23 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸತತ ಎರಡನೇ ಅವಧಿಗೆ 2 ಸ್ಥಾನ ಪಡೆಯುವ ಮೂಲಕ ಸೋಲನ್ನು ಒಪ್ಪಿಕೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾದ ಕುಸುಮಾವತಿ ಶಶಿಧರ ಗೌಡ, ರೇಣುಕಾ ವಸಂತಗೌಡ, ಲೀಲಾ ಸನತ್ ಆಚಾರ್ಯ, ಸುಮತಿ ಶೇಖರಗೌಡ ಕುದುರು, ಸೌಮ್ಯಾ ಸುರೇಂದ್ರ ಕುಕ್ಕಿಮಾರು, ಸುಮಿತ್ರಾ ಕೊರಗಪ್ಪ ಗೌಡ, ಹೇಮಾವತಿ ವೆಂಕಪ್ಪ ಮೂಲ್ಯ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಅಕ್ಕಮ್ಮ ಶ್ರೀಧರ ಮುಗೇರ ನೇತ್ರಾವತಿ ನಗರ ಜಯಗಳಿಸಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಪ್ರೇಮಾ ವಿದ್ಯಾನಂದ ಗುಡಿಗಾರ್, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಸುರೇಖಾ ನವೀನ್ ಜೈನ್ ಪಾದೆ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ವಿನುತಾ.ಡಿ ಸುದೀಶ್ ಕುಮಾರ್ ಅಟಿಕ್ಕು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಾರಿಜಾ ಪ್ರವೀಣ್ ಹಾಗೂ ಶಾಂತಾ ಅಲ್ಪ ಮತಗಳಿಂದ ಪರಾಭವಗೊಂಡರು, ಕಾಂಗ್ರೆಸ್ ಬೆಂಬಲಿತ ಆಶಾಗಣೇಶ್, ಎಲ್ಸಿ ವಿಜಯಿಯಾದರೆ, ಲೀಲಾವತಿ, ವನಜಾ, ವಿಮಲಾ ಹಾಗೂ ರಾಮಕ್ಕ ಪರಾಭವಗೊಂಡರು. ಚುನಾವಣಾ ಫಲಿತಾಂಶ ನಂತರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು ಮತ್ತು ನೂತನವಾಗಿ ಆಯ್ಕೆಯಾದ ಎಲ್ಲರನ್ನೂ ಕಾರ್ಯಕರ್ತರ ಪರವಾಗಿ ಬಿಜೆಪಿ ಇಂದಬೆಟ್ಟು ಶಕ್ತಿ ಕೇಂದ್ರದ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್. ಎಸ್ ಇಂದಬೆಟ್ಟು, ಪಂಚಾಯತ್ ಅಧ್ಯಕ್ಷೆ ಆಶಾಲತಾ, ಸದಸ್ಯ ಅನಂದ ಅಡಿಲು ಚುನಾವಣಾ ಉಸ್ತುವಾರಿ ಬೆಳ್ತಂಗಡಿ, ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಪಳನಿ ಸ್ವಾಮಿ ಪಿ. ಆರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ಎನ್, ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ಉಪಾಧ್ಯಕ್ಷ ವಸಂತ ಗೌಡ ಕಲ್ಲಾಜೆ, ನಿರ್ದೇಶಕ ರಮೇಶ್ ಕೆಂಗಾಜೆ, ರಘುನಾಥ ಕೊಲ್ಲಿ, ಪುಷ್ಪಲತಾ ನೀಲಯ್ಯ ಗೌಡ ದೇವನಾರಿ, ಬೂತ್ ಅಧ್ಯಕ್ಷ ನಿತೇಶ್ ಕಡಿತ್ಯಾರು, ನವೀನ್ ಜೈನ್, ಸಂಜೀವ ಗೌಡ, ಕಾರ್ಯದರ್ಶಿಗಳಾದ ಗಣೇಶ್ ಆಚಾರ್ಯ ಮುಂಡ್ರಬೆಟ್ಟು, ಪ್ರತೀಶ್ ಕಡಿತ್ಯಾರು, ಬಿಜೆಪಿ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದು ಪ್ರತಿಷ್ಠಿತ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದರು.