ಬೆಳ್ತಂಗಡಿ: ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಕುರಿತು ವಿಶೇಷಾ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮನವಿ ಮಾಡಿರುವ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿರುವ ಲೋಕೋಪಯೋಗಿ ಇಲಾಖೆಯ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್ ಅವರು ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಕಾರಿಯ ಬಗ್ಗೆ ತುರ್ತಾಗಿ ವರದಿ ನೀಡುವಂತೆ ಶಿವಮೊಗ್ಗ ಕೇಂದ್ರ ವಲಯದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಅಭಿಯಂತರರಿಗೆ ಕೋರಿದ್ದಾರೆ.
ಪತ್ರದ ವಿವರ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿಯ ಬಗ್ಗೆ ನೀಡಿರುವ ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ
ಲೋಕೋಪಯೋಗಿ ಸಚಿವರ ಸಮ್ಮುಖದಲ್ಲಿ ಚರ್ಚಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವುಗಳು ಅವಶ್ಯವಿರುವ ಮಾಹಿತಿಗಳನ್ನು ಕೂಡಲೇ ಕಛೇರಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್ ಅವರು ಶಿವಮೊಗ್ಗ ಕೇಂದ್ರ ವಲಯದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಅಭಿಯಂತರರಿಗೆ ಪತ್ರದ ಮೂಲಕ ಕೋರಿದ್ದಾರೆ.
ರೂ.೪.೯೫ ಕೋಟಿಯ ಹಾಗೂ ರೂ. ೨.೦೦ ಕೋಟಿಯ ಅನುಮೋದಿತ ಅಂದಾಜು ಪಟ್ಟಿಯ ಪ್ರತಿ ಸಲ್ಲಿಸಬೇಕು, ಎರಡು ಪ್ಯಾಕೇಜ್ ಟೆಂಡರ್‌ನಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪಡೆದಿರುವ ಬಗ್ಗೆ ವಿವರವಾದ ವರದಿಯನ್ನು ನೀಡಬೇಕು, ಮೊದಲನೇ ಮತ್ತು ಎರಡನೇ ಅಂದಾಜು ಪಟ್ಟಿಯಲ್ಲಿ ಹಾಗೂ ನಿರ್ವಹಿಸಿರುವ ಅಂಶಗಳ ಮತ್ತು ಪರಿಮಾಣಗಳ ಕುರಿತು ಪುನರಾವರ್ತನೆಯಾಗಿಲ್ಲದ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರವರು ದೃಢೀಕರಣ ನೀಡಬೇಕು, ರೂ.೪.೭೬ ಕೋಟಿ ಕಾಮಗಾರಿಯ ಪ್ರಗತಿಯ ಬಗ್ಗೆ ವಿವರ ಮತ್ತು ಅಂತಿಮ ಬಿಲ್ಲಿನ ಪ್ರತಿ ಸಲ್ಲಿಸಬೇಕು, ರೂ.೨.೦೦ ಕೋಟಿ ಕಾಮಗಾರಿಯಲ್ಲಿ ಈಗಾಗಲೇ ರೂ.೧೪೯,೬೧,೬೦೨.೧೩ ಮೊತ್ತದ ಕಾಮಗಾರಿ ನಿರ್ವಹಿಸಲಾಗಿದೆ ಎಂದು ವರದಿ ಮಾಡಿದ್ದು ಈ ಬಗ್ಗೆ ಅಳತೆ ಪುಸ್ತಕದ ಪ್ರತಿ ಮತ್ತು ಬಿಲ್ಲುಗಳ ಪ್ರತಿಗಳನ್ನು ದೃಢೀಕರಿಸಿ ನೀಡಬೇಕು, ಪುರಾತತ್ವ ಇಲಾಖೆಯಿಂದ ಸದರಿ ಕಟ್ಟಡವನ್ನು ಕೆಡವಲು ಅನುಮತಿ ಪಡೆಯದ ಬಗ್ಗೆ ಸಮಜಾಯಿಷಿ ನೀಡಬೇಕು, ಎರಡೂ ಕಾಮಗಾರಿಗಳ ವಿವಿಧ ಹಂತದ ಮತ್ತು ಅಂಶಗಳ ಛಾಯಾಚಿತ್ರಗಳು (ನಿರ್ವಹಿಸಿರುವ ಮತ್ತು ಪೂರ್ಣಗೊಂಡಿರುವ) ಸದರಿ ಪ್ರಕರಣದ ಬಗ್ಗೆ ಸಚಿವರಿಗೆ ಮಾಹಿತಿ ನೀಡಬೇಕಾಗಿರುವುದರಿಂದ ವರದಿಯನ್ನು ತುರ್ತಾಗಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಯ ವಿಚಕ್ಷಣದಳದ ಅಧೀಕ್ಷಕ ಇಂಜಿನಿಯರ್ ಅವರು ಶಿವಮೊಗ್ಗ ಕೇಂದ್ರ ವಲಯದ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಅಭಿಯಂತರರಿಗೆ ಕೋರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿಯಲ್ಲಿ ಅವ್ಯವಹಾರ-ಎಸ್‌ಐಟಿಯಿಂದ ತನಿಖೆ ನಡೆಸಲು ರಕ್ಷಿತ್ ಶಿವರಾಂ ಮನವಿ- ತುರ್ತಾಗಿ ಕಾಮಗಾರಿಯ ವರದಿ ನೀಡಲು ಪಿಡಬ್ಲ್ಯುಡಿ ವಿಚಕ್ಷಣದಳ ಅಧೀಕ್ಷಕರಿಂದ ಮುಖ್ಯ ಅಭಿಯಂತರರಿಗೆ ಪತ್ರ
p>