ಬೆಳ್ತಂಗಡಿ: ಆಂಧ್ರಪ್ರದೇಶದ ಗುಂಟೂರಿನಲ್ಲಿ ಇತ್ತೀಚೆಗೆ ನಡೆದ 35ನೇ ದಕ್ಷಿಣ ವಲಯದ ಜೂನಿಯರ್ ಅಥ್ಲೆಟಿಕ್ಸ್ ನ 4×100ಮೀ. ರಿಲೇ ರೇಸ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಉಡುಪಿ ಕ್ರೀಡಾ ಹಾಸ್ಟೆಲ್ ನ ಅಥ್ಲೀಟ್ ಗಳಾದ ಯತಿನ್ ನಾಯ್ಕ, ಸನತ್ ಆಚಾರ್ಯ, ಪ್ರಜ್ವಲ್, ಎಮ್.ಡಿ ಕೋಸ್ಟ ಇವರ ರಿಲೇ ತಂಡ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಪಡೆದು ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿರುವ ರಿಲೇ ತಂಡದ ಸದಸ್ಯ ಯತಿನ್ ನಾಯ್ಕ ಬೆಳ್ತಂಗಡಿ ತಾಲೂಕು ಕಲ್ಲೇರಿಯ ರೇವತಿ ಮತ್ತು ಧರ್ಮಣ್ಣ ನಾಯ್ಕ ದಂಪತಿಯ ಪುತ್ರನಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆಯೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಒಟ್ಟು ಮೂರು ಬಾರಿ 100 ಮೀ. ಓಟ ಹಾಗೂ 4*100 ಮೀ. ರಿಲೇಯಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.
p>