ಬೆಳ್ತಂಗಡಿ: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಸಮಿತಿ ನೇತೃತ್ವದಲ್ಲಿ ಕನಿಷ್ಟ ಬೇಡಿಕೆಗಳನ್ನು ಈಡೇರಿಸಲು ಬೆಳ್ತಂಗಡಿ ಸಿ.ಡಿ.ಪಿ.ಒ ಕಛೇರಿ ಮೂಲಕ ಸಚಿವರಿಗೆ ಮನವಿ

0

ಬೆಳ್ತಂಗಡಿ: ತುರ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕಿನ ಅಂಗನವಾಡಿ ನೌಕರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾರವರ ಮೂಲಕ ಅ.1ರಂದು ಮನವಿ ಸಲ್ಲಿಸಿದ್ದರು.

ಬೇಡಿಕೆಗಳು: ಪ್ರತಿ ತಿಂಗಳ 10ನೇ ತಾರೀಕಿನ ಒಳಗೆ ವೇತನ ಪಾವತಿ ಆಗಬೇಕು ಹಾಗೂ ತಕ್ಷಣ ಬಾಕಿ ಇರುವ ಎಲ್ಲಾ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.ಈಗಾಗಲೇ ಸರಕಾರ ಆದೇಶ ಮಾಡಿದಂತೆ ತಕ್ಷಣ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುವಿಟಿ ಪಾವತಿ ಮಾಡಬೇಕು, ಯಾವುದೇ ಕಾರಣಕ್ಕೂ ಸರಕಾರ ಗ್ರಾಚ್ಯುವಿಟಿ ಆದೇಶ ಮಾಡಿರುವುದನ್ನು ಕೆಲವು ಅಂಗನವಾಡಿ ನೌಕರರ ವಿರುದ್ಧವಾಗಿ ಇರುವ ಕೆಲವು ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಸಂಘಟನೆಗಳ ಒತ್ತಡಕ್ಕೆ ಬಲಿಯಾಗಿ ಗ್ರಾಚ್ಯುವಿಟಿ ನೀಡಲು ಮಾಡಿದ ಆದೇಶವನ್ನು ಸರಕಾರ ಹಿಂಪಡೆಯಬಾರದು, ಸರಕಾರ ಈಗಾಗಲೇ ನಿರ್ಧರಿಸಿದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ತಕ್ಷಣ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭಿಸಬೇಕು.ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಟೀಚರ್ ಎಂದು ಪರಿಗಣಿಸಬೇಕು.ಯಾವುದೇ ಕಾರಣಕ್ಕೂ, ಯಾವುದೇ ಒತ್ತಡಕ್ಕೂ ಈ ಆದೇಶವನ್ನು ಕೂಡಾ ಹಿಂಪಡೆಯಬಾರದು.

ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವತ್ತೂ ಇಲಾಖೇತರ ಕೆಲಸ ನೀಡಬಾರದು., ಅಂಗನವಾಡಿ ಕಾರ್ಯಕರ್ತೆಯರೂ ಮಹಿಳೆಯರೇ ಆಗಿದ್ದಾರೆ.ನಮ್ಮ ಮಹಿಳಾ ಕಲ್ಯಾಣ ಇಲಾಖೆ ಈ ಅಂಗನವಾಡಿ ನೌಕರರಿಗೆ ಯಾವುದೇ ಅವಮಾನ, ಮಾನಸಿಕ ಹಿಂಸೆ ಆಗದಂತೆ ಮೊದಲ ರಕ್ಷಣೆ ಒದಗಿಸಬೇಕು.

ಈ ಸಂದರ್ಭದಲ್ಲಿ ಸಿ.ಐ.ಟಿಯು ನಾಯಕ ಬಿ.ಎಂ.ಭಟ್, ನೌಕರರ ಸಂಘದ ತಾಲೂಕು ಅಧ್ಯಕ್ಷೆ ಗಾಯತ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಹಾಗೂ ಅಂಗನವಾಡಿ ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here