ಎಕ್ಸಲೆಂಟ್‌ನ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾಸೇವಾರತ್ನ ಪುರಸ್ಕಾರ

0

ಮೂಡುಬಿದಿರೆ: ವಿಶ್ವಶಾಂತಿ ಯುವಸೇವಾ ಸಮಿತಿ ಬೆಂಗಳೂರು ಆಯೋಜನೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಆದಿನಾಥ ವೈಭವ ಜಿನಸಹಸ್ರನಾಮ ಸ್ತುತಿ ಗಾಯನ ವಿಶ್ವದಾಖಲೆ ಕಾರ‍್ಯಕ್ರಮದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾ ಸೇವಾರತ್ನ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಕ್ರಾಂತಿಕಾರಕ ಸಾಧನೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸೇವಾ ತತ್ವರತೆ , ಜೈನ ಧರ್ಮದ ಸಂಘಟನೆಯಲ್ಲಿನ ಬದ್ಧತೆ, ನಾಡುನುಡಿಗೆ ಅನನ್ಯ ಕೊಡುಗೆಯನ್ನು ಗುರುತಿಸಿ ಈ ಪುರಸ್ಕಾರ ಮಾಡಲಾಯಿತು.

ವೇದಿಕೆಯಲ್ಲಿ ಮೂಡುಬಿದ್ರೆ ಜೈನ ಮಠದ ಪರಮಪೂಜ್ಯ ಭಾರತಭೂಷಣ ಜಗದ್ಗುರು ಸ್ವಸ್ತಿಶ್ರೀ ಭಟ್ಟಾರಕ ಡಾ.ಚಾರುಕೀರ್ತಿ ಪಂಡಿತಾಚಾರ‍್ಯವರ‍್ಯ ಮಹಾಸ್ವಾಮೀಜಿ, ಡಿ ಹರ್ಷೆಂದ್ರ ಹೆಗ್ಡೆ, ಮಾಜಿ ಸಚಿವ ಅಭಯಚಂದ್ರ ಜೈನ್, ಎಕ್ಸಲೆಂಟ್ ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್, ಧವಳಾ ಕಾಲೇಜು ಉಪನ್ಯಾಸಕರಾದ ಅಜಿತ್‌ಪ್ರಸಾದ್, ವೀಣಾ ಬಿ.ಆರ್ ಶೆಟ್ಟಿ, ವಿಶ್ವಶಾಂತಿ ಯುವಸೇನಾಸಮಿತಿಯ ನವೀನ್ ಪ್ರಸಾದ್ ಜಾಂಬಳೆ ಮತ್ತಿತರು ಉಪಸ್ಥಿತರಿದ್ದರು. ಸೇವಾಸಮಿತಿಯ ಧೀರಜ್ ಹೊಳೆನರಸೀಪುರ ಕಾರ‍್ಯಕ್ರಮ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here