ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಂಗಮಾಧ್ಯಮ ಶಾಲೆಯಲ್ಲಿ ರೇಬಿಸ್ ರೋಗದ ಕುರಿತು ಮಾಹಿತಿ ಕಾರ್ಯಾಗಾರವನ್ನು ಮುಖ್ಯ ಅತಿಥಿ ಪಶು ವೈದ್ಯ ಯತೀಶ್ ವಿದ್ಯಾರ್ಥಿಗಳಿಗೆ ಅವರು ರೇಬಿಸ್ ರೋಗ ಹಾಗೂ ಅವುಗಳ ವಿಧಗಳು, ಕಾಯಿಲೆಯು ಯಾವ ರೀತಿ ಬರುತ್ತದೆ.ನಾಯಿ ಮತ್ತು ಇತರ ಪ್ರಾಣಿಗಳ ಕಚ್ಚುವಿಕೆಯಿಂದ ರೋಗ ಹೇಗೆ ಉಂಟಾಗುತ್ತದೆ, ಪ್ರಾಣಿಗಳಲ್ಲಿ ಯಾವ ರೀತಿ ಕಾಯಿಲೆಯನ್ನು ಪತ್ತೆ ಹಚ್ಚಬಹುದು ಹಾಗೂ ಅದನ್ನು ತಡೆಗಟ್ಟುವಿಕೆ ಮತ್ತು ಅದಕ್ಕೆ ಬೇಕಾದ ಲಸಿಕೆಗಳು ಎಂಬಿತ್ಯಾದಿ ವಿಚಾರಗಳ ಕುರಿತು ಹಲವು ಉದಾಹರಣೆ ಹಾಗೂ ಪಿಪಿಟಿ ಮುಖಾಂತರ ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಿದರು.
ಬಳಿಕ ವಿದ್ಯಾರ್ಥಿಗಳ ಪ್ರಶ್ನೋತ್ತರ ಮುಖಾಂತರ ತಮ್ಮ ಸಂದೇಹವನ್ನು ಪರಿಹರಿಸಿದರು.ಶಾಲಾ ವಿದ್ಯಾರ್ಥಿನಿ ಕುಮಾರಿ ಅನುಜ್ಞ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ.ಸ್ವಾಗತಿಸಿ ಶಾಲಾ ವಿದ್ಯಾರ್ಥಿನಿ ಕುಮಾರಿ ಕಲ್ಪಿತ ವಂದಿಸಿದರು.
ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
p>