ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ- ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ

0

ಮಡಂತ್ಯಾರು: ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸಪ್ಟೆಂಬರ್ 20ರಂದು ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ 10ನೇ ತರಗತಿಯ ಅಲಿನಾ ಅನಿಶ್ ಮತ್ತು ಸಾನಿಯಾ ಲೀರಾರವರು  ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ 10ನೇ ತರಗತಿಯ ಸ್ವರ್ಣಗೌರಿ, ಜೋಷ್ಮ ಜೋಸ್, ಲಿಸ್ಟನ್ ಕಾರ್ಲ್ ರವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಸಾಮೂಹಿಕ ಜನಪದ ನೃತ್ಯದಲ್ಲಿ 10ನೇ ತರಗತಿಯ ದೃತಿ ನಾಯಕ್ , ಶ್ರೀಲಕ್ಷ್ಮೀ, ಚರಿಶ್ಮರೈ, ದಿಯಾ ಸಿಕ್ವೇರ, ಲಿಸ್ಟನ್ ಕಾರ್ಲ್, ಪ್ರಣಯ ಶೆಟ್ಟಿ, ರೋಲೆನ್ ಸಿಕ್ವೇರಾ ಮತ್ತು 9ನೇ ತರಗತಿಯ ಬಿಂದು, ಯಕ್ಷ್ಮೀ, ಆಲ್ರನ್ ಫೆರ್ನಾಂಡೀಸ್ ರವರು ಭಾಗವಹಿಸಿ ದ್ವಿತೀಯ  ಸ್ಥಾನವನ್ನು ಪಡೆದಿರುತ್ತಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಇವರಿಗೆ ಶಾಲಾ ಶಿಕ್ಷಕ ವೃಂದದವರು ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here