ಕಲ್ಲೇರಿ: ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕಳೆದ ಆರ್ಥಿಕ ವರ್ಷದಲ್ಲಿ 23 ಕೋಟಿ ರೂ.ವ್ಯವಹಾರ ನಡೆಸಿ ರೂ. 9 ಲಕ್ಷ 92 ಸಾವಿರ ರೂ.ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 10% ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷ ಎಂ. ಜನಾರ್ದನ ಪೂಜಾರಿ ಗೇರುಕಟ್ಟೆ ಹೇಳಿದರು.ಸೆ.22ರಂದು ಕಲ್ಲೇರಿ ಬಾಪೂಜಿ ಕೇಂದ್ರದಲ್ಲಿ ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಬ್ಬರು ಸಿಬ್ಬಂದಿಗಳಿಂದ ಪ್ರಾರಂಭಗೊಂಡ ನಮ್ಮ ಸಂಘ ಇಂದು ಉನ್ನತ ಮಟ್ಟದಲ್ಲಿ ಬೆಳೆದು ಬಂದಿದೆ. ಸಂಘ ತನ್ನದೇ ಸ್ವಂತ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘವು ತನ್ನ ಇನ್ನೊಂದು ಶಾಖೆಯನ್ನು ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ತೆರೆಯಲಿದ್ದು ಎಲ್ಲಾರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಉಪಾಧ್ಯಕ್ಷ ಸದಾನಂದ ಸಾಲ್ಯಾನ್ , ನಿರ್ದೇಶಕರಾದ ಪ್ರಭಾಕರ ಸಾಲ್ಯಾನ್, ಸೂರಪ್ಪ ಬಂಗೇರ ಹಾಗೂ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ಎಂ. ಜನಾರ್ದನ ಪೂಜಾರಿ ಗೇರುಕಟ್ಟೆ ಅವರನ್ನು ಗೌರವಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾನೂನು ಸಲಹೆಗಾರ ವಿನಯ್, ವಕೀಲ ಮನೋಹರ್ ಕುಮಾರ್ ಇಳಂತಿಲ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತುಕಾರಾಮ ಪೂಜಾರಿ ಗೇರುಕಟ್ಟೆ, ಅಂಡೆತ್ತಡ್ಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿ, ತೆಕ್ಕಾರು ಪ್ಯಾಕ್ಸ್ ಸಿಇಒ ರಾಘವೇಂದ್ರ ಅಡಪ, ನವಚೇತನ ತೋಟಗಾರಿಕಾ ಸಂಸ್ಥೆಯ ನಿರ್ದೇಶಕ ಯೋಗಿಶ್ ಪೂಜಾರಿ ಅಳಕ್ಕೆ, ಸಿಇಒ ನಾರಾಯಣ ಶೆಟ್ಟಿ ಹಾಗೂ ನಾಟಿ ವೈದ್ಯ ಸೂರಪ್ಪ ಪೂಜಾರಿ ಅಳಕ್ಕೆ ಉಪಸ್ಥಿತರಿದ್ದರು.
ವ್ಯವಸ್ಥಾಪಕಿ ಮಮತಾ ಯೋಗಿಶ್ ಅಳಕ್ಕೆ ವರದಿ ಮಂಡಿಸಿದರು. ಅನುಜ್ಞಾ ಸಾಲ್ಯಾನ್ ಪ್ರಾರ್ಥಿಸಿದರು. ನಗದು ಗುಮಾಸ್ತೆ ರೇಖಾ ಸ್ವಾಗತಿಸಿ, ನಿರ್ದೇಶಕ ರವೀಂದ್ರ ಪೂಜಾರಿ ಬೋಲೋಡಿ ನಿರೂಪಿಸಿದರು. ಸಿಬ್ಬಂದಿಗಳಾದ ದೀಪ್ತಿ, ಭುವನ್, ಪಿಗ್ಮಿಸಂಗ್ರಾಹಕರಾದ ದಿನೇಶ್ ಕುಮಾರ್, ಸುಂದರ ಎಂ.ಜಿ. ಪುಷ್ಪಾಕರ ನಾಯಕ್ ಹಾಗೂ ಸೌಮ್ಯ ದಿನೇಶ್ ಸಹಕರಿಸಿದರು.