ಇಂದಬೆಟ್ಟು: ವಲಯದ ನೂತನ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಕೊಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು.
ಈ ಕಾರ್ಯಗಾರವನ್ನು ಗೌರವಾನ್ವಿತ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಉದ್ಘಾಟಿಸಿ ಯೋಜನೆಯು ಪ್ರಾರಂಭವಾದ ಬಗ್ಗೆ, ಯೋಜನೆಯಿಂದ ನಡೆಯುವಂತ ಕಾರ್ಯಕ್ರಮಗಳು, ಯೋಜನೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ, ಬಿಸಿ ಕಾರ್ಯಕ್ರಮ, ಬಡ್ಡಿ ದರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ತಾಲೂಕಿನ ಮಾನ್ಯ ಯೋಜನಾಧಿಕಾರಿಯ ಸುರೇಂದ್ರ ಯೋಜನೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಸುಜ್ಞಾನ ನಿಧಿ, ವಾತ್ಸಲ್ಯ ನಿಧಿ, ನಿರ್ಗತಿಕರಿಗೆ ಸಿಗುವಂತಹ ಮಾಸಾಶನ, ಸಂಪೂರ್ಣ ಸುರಕ್ಷಾ ಕಾರ್ಯಕ್ರಮ, ಕ್ಯಾನ್ಸರ್ ಖಾಯಿಲೆಗೆ ಸಿಗುವಂತಹ ಕ್ರಿಟಿಕಲ್ ಇಲ್ ನೆಸ್ ಫಂಡ್ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಬಡ್ಡಿ ಲೆಕ್ಕಾಚಾರ, ಬಿಸಿ ಟ್ರಸ್ಟ್ ಬಗ್ಗೆ, ಲಾಭಾಂಶದ ಬಗ್ಗೆ ಮಾಹಿತಿ ನೀಡಿದರು, ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರ, ಒಕ್ಕೂಟದ ನಿರ್ವಹಣೆ ದಾಖಲಾತಿ ನಿರ್ವಹಣೆ, ಉಪಸಮಿತಿ ಸಭೆ, ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕಿ ಉಷಾ ಕಾರ್ಯಕ್ರಮ ನಿರೂಪಿಸಿ, ಎಲ್ಲರನ್ನೂ ಸ್ವಾಗತಿಸಿದರು. ನಾವೂರು ‘ಎ’ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸುನೀತಾ ಇವರು ಧನ್ಯವಾದ ತಿಳಿಸಿದರು.ಈ ಸಂದರ್ಭ 8 ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.