ಉಜಿರೆ: ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಸೆ.17ರಂದು ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು. ಮುಖ್ಯ ಆತಿಥಿಗಳಾಗಿ ಉಜಿರೆ ಶ್ರೀ ಧ.ಮಂ ಐ.ಟಿ ಕಾಲೇಜಿ ಉಜಿರೆಯ ಪ್ರಾಧ್ಯಪಕ ಕೃಷ್ಣ ಪ್ರಸಾದ್ ಮಾತಡಿ ಇಂಜಿನಿಯರ್ಸ್ ದಿನದ ಮಹತ್ವ ಮತ್ತು ಡಾ.ವಿಶ್ವೇಶ್ವರಯ್ಯರವರ ಸಾಧನೆ ಅವರು ದೇಶಕ್ಕೆ ನೀಡಿದ ಆಗಾಧ ಕೊಡುಗೆಯಾದ ಅವರು ನಿರ್ಮಿಸಿದ ಕೃಷ್ಣ ರಾಜಸಾಗರ ಅಣೆಕಟ್ಟು, ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ಕೊಡುಗೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಮುಖ್ಯೋಪಾಧ್ಯಾಯ ಕೆ.ಸುರೇಶ್ ಮಾತನಾಡಿ ಇಂಜಿನಿಯರ್ ಗಳ ಸಾಧನೆ ಹೊಸ ಅವಿಷ್ಕಾರಗಳ ಉಗಮ ಇಂಜಿನಿಯರ್ ಗಳ ಬುದ್ಧಿಮಟ್ಟವನ್ನು ಹೊಗಳಬಹುದಾದ ದಿನ ಎಂದರು.
ವಿದ್ಯಾರ್ಥಿಗಳಾದ ಅನ್ವಿತ್ 9ನೇ ತರಗತಿ 163ನೇ ಹುಟ್ಟುಹಬ್ಬದ ಡಾ.ವಿಶ್ವೇಶ್ವರಯ್ಯರವರÀ ಪರಿಚಯ ಸಾಧನೆಯ ಬಗ್ಗೆ ವಿವರಿಸಿದರು, 9ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡಿದರು ಭವ್ಯಶ್ರೀ 8ನೇತರಗತಿ ಸ್ವಾಗತಿಸಿದರು. ನಮಿತ್ 9ನೇ ತರಗತಿ ಧನ್ಯವಾದ ಸಮರ್ಪಿಸಿದರು. ಅಪ್ಪು 10ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.