ಪದ್ಮುಂಜ: ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.17ರಂದು ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡರವರ ಅಧ್ಯಕ್ಷತೆಯಲ್ಲಿ ಪದ್ಮುಂಜ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ಸಂಘದ ಸಿಬ್ಬಂದಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡವಳಿಗಳನ್ನು ಗುಮಾಸ್ತೆ ಹೇಮಲತಾ ಓದಿ ಹೇಳಿದರು.
2023-24ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಜಯರಾಮ ಶೆಟ್ಟಿ ಓದಿ ಹೇಳಿದರು.
ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಹೈನುಗಾರಿಕೆಯ ಮಾಹಿತಿ ನೀಡಿದರು. ನಿವೃತ್ತ ಸೈನಿಕ ಗಣೇಶ್ ಶೆಟ್ಟಿ, ಪವರ್ ಮೆನ್ ಸಂದೀಪ್ ಮತ್ತು ಕ್ರೀಡಾ ಪಟು ತೇಜಸ್ವಿನಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ ಮಾಡಲಾಯಿತು. ಹಾಲು ಪೊರೈಸಿದ ಸದಸ್ಯರಿಗೆ ಗಿಫ್ಟ್ ಪ್ಲೇಟ್ ನೀಡಲಾಯಿತು.
ಅಧ್ಯಕ್ಷ ಪುರುಷೋತ್ತಮ ಮಾತನಾಡಿ ಸಂಘದ ನಿರ್ದೇಶಕರು ಹಾಗೂ ಹಾಲು ಹಾಕುವವರ ಸಹಕಾರ ಕೋರಿದರು. ಸಂಘದ ಕಾರ್ಯದರ್ಶಿ ಸೇರಿದಂತೆ ಸಿಬ್ಬಂದಿಗಳ ಪ್ರಾಮಾಣಿಕವಾದ ಸೇವೆಯಿಂದ ನಮ್ಮ ಸಂಘ
23/24/ಸಾಲಿನಲ್ಲಿ 17.51.20.447 ರೂ ವ್ಯವಹಾರ ನಡೆಸಿ 13.60.071 ಸಾವಿರ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರಾದ ಸದಾಶಿವ ಶೆಟ್ಟಿ, ಶೀನಪ್ಪ ಗೌಡ, ರಾಜೇಶ್ ಎ, ಕರಿಯಪ್ಪ, ಪುರುಷೋತ್ತಮ ಗೌಡ, ಉಮೇಶ್ ಪೂಜಾರಿ, ರಮಾನಂದ ಎಂ, ಶಾರದಾ ಆರ್. ಗೌಡ, ಪ್ರತಿಮಾ, ಕೃಷ್ಣ ನಾಯ್ಕ, ಸುನಿಲ್ ಕುಮಾರ್, ಪದನಿಮಿತ್ತ ಸದಸ್ಯ ರಾಜೇಶ್ ಕಾಮತ್, ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ರಮಾನಂದ ಮುಗೆರೋಡಿ ವಂದಿಸಿದರು.