ಬೆಳ್ತಂಗಡಿ: ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಹೊರಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇವರ ಜಂಟಿ ಆಶ್ರಯದಲ್ಲಿ 2024-25 ನೇ ಸಾಲಿನ ವಾಮದ ಪದವು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯು ಸೆಪ್ಟೆಂಬರ್ 13ರಂದು ನಡೆಯಿತು.
ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಮೋಘ ಸಾಧನೆಯನ್ನು ಮಾಡಿರುತ್ತಾರೆ. ಕವನ ವಾಚನ ಸ್ಪರ್ಧೆಯಲ್ಲಿ ಒಂಭತ್ತನೇ ತರಗತಿಯ ಪ್ರತಿಕ್ಷಾ ಪ್ರಥಮ ಸ್ಥಾನ ಹಾಗೂ ಆಶುಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು, ಕನ್ನಡ ಭಾಷಣದಲ್ಲಿ ಹತ್ತನೇ ತರಗತಿಯ ಪ್ರಾರ್ಥನಾ ದ್ವಿತೀಯ ಸ್ಥಾನವನ್ನು , ಭಾವಗೀತೆ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಹಿತೇಶ್ ಟಿ ಆರ್ ದ್ವಿತೀಯ ಸ್ಥಾನ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸಮೃದ್ಧ್ ಮತ್ತು ಎಂ ಮಿಥಿಲ್ ಕುಮಾರ್, ಜನಪದ ನೃತ್ಯ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಅನ್ವಿತಾ ,ಶ್ರಾವ್ಯ, ಬಿಂದು , ಜಾಹ್ನವಿ , ದೀಪ್ತಿ , ಒಂಭತ್ತನೇಯ ದಿಶಾ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.