ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಮಾನವ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವ ಕುರಿತು ಸಂವಾದಾತ್ಮಕ ಕಾರ್ಯಾಗಾರ

0

ಕೊಕ್ಕಡ: ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ನಡೆದ ‘ಸಿಬ್ಬಂದಿಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಅಡಿಯಲ್ಲಿ ಮಾನವ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವದ ಕುರಿತು (Human Relations and Positive Attitude) ಸಂವಾದಾತ್ಮಕ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಎಸ್ ಡಿ ಎಮ್ ವಸತಿಯುತ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಕೃಷ್ಣಮೂರ್ತಿ ನಡೆಸಿಕೊಟ್ಟರು.

ವ್ಯಕ್ತಿಗತ ಚಿಂತನೆಯಲ್ಲಿ ನಕಾರಾತ್ಮಕ ಮನೋಭಾವವನ್ನು ಹೊಂದಿದ್ದರೆ, ಅದರ ಪ್ರತಿಯಾಗಿ ಪಡೆಯಲಿರುವುದು ನಕಾರಾತ್ಮಕತೆ ಮಾತ್ರ. ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದರಿಂದ ಸಂಬಂಧದ ಬಗ್ಗೆ ಕಾಳಜಿ ವಹಿಸುತ್ತೀರಿ ಎಂದರು. ನಿತ್ಯ ಜೀವನದ ಒತ್ತಡ ನಡುವೆ ಮಾನವೀಯ ಸಂಬಂಧಗಳು ಮತ್ತು ಧನಾತ್ಮಕ ಮನೋಭಾವನೆಯ ಪ್ರಾಮುಖ್ಯತೆಯ ಬಗೆಗೆ ಸವಿಸ್ತಾರವಾಗಿ, ಕ್ರಿಯಾತ್ಮಕ ಚಟುವಟಿಕೆಗಳೊಂದಿಗೆ ಮಾಹಿತಿ ಇತ್ತರು ಸಂಸ್ಥೆಯ ಪರವಾಗಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೊಕ್ಕಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಕೃಷ್ಣ ಭಟ್, ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕ ಕೆ.ವಿನಾಯಕ ರಾವ್, ಕಾರ್ಯದರ್ಶಿ ಬಾಲಕೃಷ್ಣ, ಸ್ವಯಂಸೇವಕ ಮೈಲಾರಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗ, ಕೇಂದ್ರದ ಸನಿವಾಸಿಗಳು, ಆರೈಕೆದಾರರು ಹಾಗೂ ಸ್ವಯಂಸೇವಕರು ಸೇರಿ ಒಟ್ಟು 25 ಮಂದಿ ಭಾಗವಹಿಸಿದ್ದರು. ಸೇವಾಭಾರತಿಯ ಅಕೌಂಟೆಂಟ್ ಕು.ಅಕ್ಷತಾ ಸ್ವಾಗತಿಸಿ, ನಿರೂಪಿಸಿ, ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here