ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.12ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ. ರವರು ಸಂಘವು 31.40ಕೋಟಿ ಠೇವಣಿ ಹೊಂದಿದ್ದು, ರೂ.38.30ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ.98%ರಷ್ಟು ವಸೂಲಾತಿ ಆಗಿರುತ್ತದೆ. ವಾರ್ಷಿಕ ರೂ.214.90ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂ.1,16,15,869.66 ಲಾಭ ಗಳಿಸಿ ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಪಡೆದುಕೊಂಡಿದ್ದು, ಸದಸ್ಯರಿಗೆ ಶೇ. 14 ಡಿವಿಡೆಂಡ್ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪಿ. ಯವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಈಶ್ವರ ಭಟ್, ನಿರ್ದೇಶಕರಾದ ಜಾರಪ್ಪ ಗೌಡ ಎಸ್., ಮಹಾಬಲ ಶೆಟ್ಟಿ, ಪದ್ಮನಾಭ ಗೌಡ, ವಿಶ್ವನಾಥ ಕೆ., ವಿಠಲ ಭಂಡಾಟಿ, ಪ್ರೇಮಾವತಿ, ವೇದಾವತಿ, ವಿಶ್ವನಾಥ ಎಂ.ಕೆ, ಕೇಶವ ಕೆ., ಮೋನಪ್ಪ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಕೆ ಉಪಸ್ಥಿತರಿದ್ದರು.
ಸಹನಾ, ಚೈತನ್ಯ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ ಸ್ವಾಗತಿಸಿದರು. ಗುಮಾಸ್ತ ಸುಂದರ ಗೌಡ ಕೆ ಕಾರ್ಯಕ್ರಮ ನಿರೂಪಿಸಿದರು.