ಕನ್ಯಾಡಿ-2: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 15ನೇ ವರ್ಷದ ಮೊಸರು ಕುಡಿಕೆ ಉತ್ಸವ ಧರ್ಮಸ್ಥಳ ಎರ್ಮುಂಜೆ ಬೈಲ್ ನಾರ್ಯ ಸುಜ್ಞಾನ ಭವನ ವಠಾರದಲ್ಲಿ ಸೆ.8ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಕೀಲ ಕೇಶವ ಪಿ ಬೆಳಾಲು ನೆರವೇರಿಸಿ ಮಾತನಾಡಿದ ಇವರು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಚರಣೆ ಮಾಡಲು ಯಾವುದೇ ತೊಂದರೆ ಇಲ್ಲ ಹಿಂದೂಗಳು ನೀರು, ಗಾಳಿ ಪರಿಸರ ಪ್ರಾಣಿ ಸರ್ವ ವಿಧದಲ್ಲಿ ದೇವರನ್ನು ಕಾಣುತ್ತೇವೆ ಇದು ನಮ್ಮ ಸಂಸ್ಕೃತಿ ಸರ್ವ ಧರ್ಮಗಳನ್ನು ಪ್ರೀತಿಸುವ ಧರ್ಮ, ಧರ್ಮದ ಹೆಸರಿನಲ್ಲಿ ಅನ್ಯಾಯವಾದಗ ಅಲ್ಲಿ ಶ್ರೀ ಕೃಷ್ಣ ಜನ್ಮತಾಳಿದ, ನಾವು ದೊಡ್ಡವರನ್ನು ನೋಡಿ ಬದುಕುವುದು ಬೇಡ ಕೆಳಗಿನವರನ್ನು ನೋಡಿ ಬದುಕುವ ಎಂದರು.
ದಾಮೋದರ್ ದೊಂಡೋಲೆ ಮಾತಾನಾಡಿ ನಮ್ಮ ಊರಿನ ಸಂಸ್ಕ್ರತಿಯನ್ನು ನಾವು ಬೆಳೆಸಿಕೊಂಡು ಹೋಗಬೇಕು ಅಭಿವೃದ್ಧಿ ಸರ್ಕಾರ ಮಾತ್ರ ಮಾಡುವುದಲ್ಲ ನಾವೆಲ್ಲ ಒಟ್ಟಾಗಿ ಸೇರಿಕೊಂಡು ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರಿಗೆ ವಿವಿದ ಆಟೋಟ ಸ್ಪಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲಿ ಸಭಾ ಅಧ್ಯಕ್ಷರಾಗಿ ಸೇವಾಭರತಿ ಕನ್ಯಾಡಿ ಕಾರ್ಯದರ್ಶಿ ಬಾಲಕೃಷ್ಣ ನೈಮಿಷ ವೇದಿಕೆಯಲ್ಲಿ ವಿ.ಹೆಚ್. ಪಿ ವಿಭಾಗ ಸಾಮರಸ್ಯ ಪ್ರಮುಖ್ ಬಾಸ್ಕರ್ ಡಿ. ಧರ್ಮಸ್ಥಳ ಊರಿನ ಹಿರಿಯರಾದ ಚಂದ್ರ ಶೆಟ್ಟಿ ನಾರ್ಯ ಉದ್ಯಮಿ ಸಂತೋಷ ಜೈನ್ ನಾರ್ಯ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರು ಅಭಿಲಾಶ್ ಕಾಣಮೇರು, ಕಾರ್ಯದರ್ಶಿ ದಿನೇಶ್ ನಾರ್ಯ ಖಜಾಂಚಿ ಗಗನ್ ಪುತ್ತಿಲ ಜೊತೆ ಕಾರ್ಯದರ್ಶಿ ಚೇತನ್ ಗೌಡ ಪುತ್ತಿಲ ಉಪಸ್ಥಿತಿತರಿದ್ದರು. ಸಂತೋಷ ಪುದುವೆಟ್ಟು ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಸನ್ಮಾನ ಕಾರ್ಯಕ್ರಮ: ಹಿರಿಯ ನಾಗರಿಕರಾದ , ಮುದ್ದ ಹಿಪ್ಪ ಚೋಮ ಹಿಪ್ಪ ,ಚಿನ್ನಯ್ಯ ಗೌಡ ನಾರ್ಯ, ಕುಂಞ ಗೌಡ ಪಾದೆ, ಮೆಸ್ಕಾಂ ಇಲಾಖೆಯ ಲೈನ್‌ಮ್ಯಾನ್ ಬಸಪ್ಪ ತೆಲಗಿನ ಮನಿರವರನ್ನು ಸನ್ಮಾನಿಸಲಾಯಿತು.