ಬೆಳ್ತಂಗಡಿ: ಬದಲಾದ ಪರೀಕ್ಷಾ ಮಾರ್ಗಸೂಚಿಗೆ ಅನುಸಾರವಾಗಿ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಿನಾಂಕ 15.09.2024 ಹಾಗೂ 16.09.2024 ರಂದು ಬೆಳಿಗ್ಗೆ ಸಮಯ 9.30ರಿಂದ ಸಾಯಂಕಾಲ 4.00ರವರೆಗೆ ಕಡ್ಡಾಯ ಕನ್ನಡ ಪರೀಕ್ಷೆಯ ಪೂರ್ವ ಸಿದ್ದತಾ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದು, ಈ ತರಬೇತಿಯ ಸದುಪಯೋಗವನ್ನು ಪಡೆಯಲು ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಕಡ್ಡಾಯ ಕನ್ನಡ ಪರೀಕ್ಷೆಗೆ ಇಷ್ಟೊಂದು ಮಹತ್ವ ಯಾಕೆ: ಕರ್ನಾಟಕ ರಾಜ್ಯ ಸರಕಾರದ ಬಹುತೇಕ ನೇಮಕಾತಿಗಳಲ್ಲಿ ಇಲ್ಲಿಯವರೆಗೆ ತುಂಬಾನೇ ಮಹತ್ವ ಪಡೆಯದ ಕಡ್ಡಾಯ ಕನ್ನಡ ಪರೀಕ್ಷೆಯು ಈ ಸಲ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆಯ ಈ ಕೆಳಗಿನ ಅಂಶಗಳು ಟರ್ನಿಂಗ್ ಪಾಯಿಂಟ್ ಆಗಲಿದೆ.
VAO ಹುದ್ದೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯವಾಗಿದೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ VAO ನೇಮಕಾತಿ ಪರೀಕ್ಷೆಗೆ ಹಾಜರಾಗಲು ಅರ್ಹತೆ ಇರಲಿದೆ, ಉತ್ತೀರ್ಣರಾಗಲು ಕನಿಷ್ಠ 50 ಅಂಕವನ್ನು ಪಡೆಯಲೇಬೇಕು, 150ಅಂಕಗಳಿಗೆ ನಡೆಯಲಿರುವ ಪರೀಕ್ಷೆ, ದಿನಾಂಕ 29.09.2024 ಆದಿತ್ಯವಾರದಂದು ನಡೆಯಲಿರುವ ಕಡ್ಡಾಯ ಕನ್ನಡ ಪರೀಕ್ಷೆ.
ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿ ಕಾರ್ಯಗಾರಕ್ಕೆ ಹಾಜರಾಗಬಯಸುವ ಅಭ್ಯರ್ಥಿಗಳು ಕೂಡಲೇ ಈ ಕೆಳಗಡೆ ನೀಡಲಾಗಿರುವ ವಿಳಾಸ/ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
ವಿದ್ಯಾಮಾತಾ ಅಕಾಡೆಮಿ: ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201, PH: 9148935808 / 96204 68869 / 9448527606