ಬೆಳ್ತಂಗಡಿ: ಕರ್ನಾಟಕ ಬ್ಯಾಂಕ್ ನವರು ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜುಗೆ ಕಾಲೇಜಿನ ಮೂಲಭೂತ ಸೌಕರ್ಯಕ್ಕಾಗಿ ತಮ್ಮ ಬ್ಯಾಂಕಿನ ಸಿ.ಎಸ್.ಆರ್. ಫಂಡಿನಿಂದ ರೂ. 6.25 ಲಕ್ಷಗಳ ಮೊತ್ತದಲ್ಲಿ 50 ಬೆಂಚು ಮತ್ತು 50 ಡೆಸ್ಕಗಳನ್ನು ನೀಡಿದರು.
ಇವುಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕಿನ ಕೇಂದ್ರ ಕಚೇರಿಯ ಪರವಾಗಿ ಮೂಡಬಿದ್ರೆ ಕ್ಲಸ್ಟರಿನ ಮುಖ್ಯಸ್ಥ ಲಕ್ಷ್ಮೀನಾರಾಯಣ ಹಾಗೂ ಉಜಿರೆ ಬ್ರಾಂಚಿನ ಮ್ಯಾನೇಜರ್ ವಿನಾಯಕ ಪ್ರಭುರವರು ಡೆಸ್ಕು ಮತ್ತು ಬೆಂಚುಗಳನ್ನು ಹಸ್ತಾಂತರಗೊಳಿಸಿದರೆ ಕಾಲೇಜಿನ ಪರವಾಗಿ ಪ್ರಾಂಶುಪಾಲ ಸುಕುಮಾರ್ ಜೈನ್ ಸ್ವೀಕರಿಸಿದರು.
ಕರ್ನಾಟಕ ಬ್ಯಾಂಕ್ ನವರ ಉದಾರ ಕೊಡುಗೆಯನ್ನು ಕೊಂಡಾಡಿದ ಪ್ರಾಂಶುಪಾಲರು ಕರ್ನಾಟಕ ಬ್ಯಾಂಕಿನ ಆಡಳಿತ ವರ್ಗಕ್ಕೆ ಕಾಲೇಜಿನ ಪರವಾಗಿ ಕೃತಜ್ಞತೆಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಸಕ್ತ ವರ್ಷ ನಮ್ಮ ಸಂಸ್ಥೆಯಲ್ಲಿ 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇವುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸೇರಿರುವ ವಿದ್ಯಾರ್ಥಿಗಳಾಗಿದ್ದು ಇವರ ವಿದ್ಯಾರ್ಜನೆಗೆ ಕರ್ನಾಟಕ ಬ್ಯಾಂಕ್ ನವರ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಆಶಿಸಿದರು.
ಮೋಹನ್ ಭಟ್ ನಿರೂಪಿಸಿ, ಮಂಗಳ ಗೌರಿ ಸ್ವಾಗತಿಸಿ, ವಿಶಾಲಾಕ್ಷಿ ವಂದನಾರ್ಪಣೆ ಗೈದರು.