ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗನ ದರ್ಬಾರ್

0

ಚಾರ್ಮಾಡಿ: ಚಾರ್ಮಾಡಿ ಘಾಟಿ ಪರಿಸರದಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ.ಸೆ.9ರಂದು ತಡರಾತ್ರಿ ಘಾಟಿ ಭಾಗದ ಅಣ್ಣಪ್ಪ ಬೆಟ್ಟದಿಂದ ಸೋಮನ ಕಾಡು ಅರಣ್ಯ ಭಾಗದ ತನಕ ರಸ್ತೆಯಲ್ಲಿ ಸವಾರಿ ನಡೆಸಿದ ಕಾಡಾನೆ ಬಳಿಕ ಸೋಮನ ಕಾಡು ಪರಿಸರದ ಅರಣ್ಯ ಪ್ರದೇಶದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿ ವಾಹನ ಸವಾರರು ತಿಳಿಸಿದ್ದಾರೆ.

ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದ ವೇಳೆ ಹಲವು ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಕಂಡು ಬಂತು. ಮಂಜಿನ ವಾತಾವರಣ, ನಿರಂತರ ಸುರಿಯುವ ಮಳೆ, ಜೊತೆಗೆ ಕಾಡಾನೆಯ ತಿರುಗಾಟ ಘಾಟಿ ಪ್ರದೇಶದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗಿದೆ.

ಸೆ.10ರಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here