



ಪಟ್ಟೂರು: ಹಾಲು ಉತ್ಪಾದಕರ ಸಹಕಾರಿ ಸಂಘದ ಅಂಗ ಸಂಸ್ಥೆಯಲ್ಲಿ ಸೆ.6ರಂದು ಮುಂಡೂರುಪಳಿಕೆ ಹಾಲು ಉತ್ಪಾದಕರ ಘಟಕದ ಉದ್ಘಾಟನೆಯನ್ನು ಸುರೇಶ್ ಭಟ್ ತೆಂಕುಬೈಲು ನೆರವೇರಿಸಿದರು.
ಈ ಸಂದರ್ಭ ದ.ಕ. ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ರಾಜೇಶ್ ಕಾಮತ್, ಪಟ್ಟೂರು ಹಾಲು ಘಟಕದ ಅಧ್ಯಕ್ಷ ತಿಮ್ಮಪ್ಪಶೆಟ್ಟಿ, ಪಟ್ಟೂರು ಘಟಕದ ಕಾರ್ಯದರ್ಶಿ ಸುಗಂಧಿ, ಹರೀಶ್ ಗುಂಡಿಲೆ, ಪ್ರವೀಣ್ ಶೆಟ್ಟಿ ಪಟ್ಟೂರು, ವಿಶ್ವನಾಥ ಕಕ್ಕುದೊಲಿ ಕೊಕ್ಕಡ ಗ್ರಾ.ಪಂ. ಸದಸ್ಯ ವಿಠಲ ಗೌಡ ತೆಂಕುಬೈಲ್, ವಸಂತ, ಶಶಿಧರ ಬದಿಜಾಲು., ಇವರ ಮುಂದಾಳತ್ವದಲ್ಲಿ ಹಾಲು ಘಟಕ ಉದ್ಘಾಟನೆಯಾಯಿತು.



ಈ ಸಂದರ್ಭ ಗಣ್ಯರನ್ನು ಮತ್ತು ಊರಿನ ನಾಗರಿಕರನ್ನು ವಿಠಲ ತೆಂಕುಬೈಲು ಸ್ವಾಗತಿಸಿ, ಉದ್ಘಾಟಕರು ಪ್ರಸ್ತಾವಿಕ ಭಾಷಣ ಮಾಡಿದರು.
ದ.ಕ.ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿ ಹೈನುಗಾರಿಕೆಯ ಬಗ್ಗೆ ಮಾತನಾಡಿದರು. ರಾಮಕುಸುಮ ಎಸ್ಟೇಟ್ ನ ಮಾಲಕ ಮಾತನಾಡಿ ಶುಭ ಹಾರೈಸಿದರು. ಊರಿನ ಹಿರಿಯರು, ನಾಗರಿಕರು ಉಪಸ್ಥಿತರಿದ್ದರು.









