ಬೆಳ್ತಂಗಡಿ: ವರ್ತಮಾನವನ್ನು ನಿರ್ದಿಷ್ಟವಾಗಿ ಬಳಸಿಕೊಳ್ಳುವುದರಿಂದ ಭವಿಷ್ಯವನ್ನು ಉತ್ತಮವಾಗಿಸಲು ಸಾಧ್ಯ ಎಂದು ಬೆಳಾಲು ಶ್ರೀ.ಧ.ಮಂ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯ ರಾಮಕೃಷ್ಣ ಭಟ್ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ, ಜೀವನದಲ್ಲಿ ಒಳ್ಳೆಯದು ಘಟಿಸಲು ತುಂಬಾ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಬದುಕುವ ದಾರಿಯಲ್ಲಿ ಅಡೆತಡೆಗಳಿರುವುದು ಸಹಜ. ಅದನ್ನೆಲ್ಲಾ ಪರಿಹರಿಸಿ ವ್ಯಕ್ತಿ ಶೀಲತೆ ಮತ್ತು ವೃತ್ತಿಶೀಲತೆಯನ್ನು ಪಡೆಯಲು ಗುರುಗಳು ಕಾರಣವಾಗುತ್ತಾರೆ. ನಮ್ಮೊಳಗೆ ಇರುವ ಗುರು ನಿರ್ದಿಷ್ಟ ಗುರಿಯನ್ನು ತಲುಪಿಸುತ್ತಾರೆ. ಶಿಕ್ಷಣವನ್ನು ಬದುಕಾಗಿಸುವುದರಲ್ಲಿ ಪ್ರತಿಯೊಬ್ಬರು ಸಫರಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಧೀರ್ ಕೆ ಎನ್ ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಬೆಳಿಯಪ್ಪ.ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾತ್ವಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಸಮನ್ವಿತ್ ವಂದಿಸಿದರು. ಅನುಕ್ಷಾ ಕಾರ್ಯಕ್ರಮ ನಿರೂಪಿಸಿದರು.