ಆರಂಬೋಡಿ: ಬಜಿರೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಹೊಕ್ಕಾಡಿಗೋಳಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಹುಲಿಮೇರು ವಹಿಸಿದ್ದರು. ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಉದ್ಘಾಟಿಸಿ ಶುಭ ಹಾರೈಸಿದರು.ಪಂಚಾಯತ್ ಉಪಾಧ್ಯಕ್ಷೆ ತೇಜಸ್ವಿನಿ, ಸದಸ್ಯರಾದ ಸತೀಶ್ ಪೂಜಾರಿ, ಪ್ರಭಾಕರ ಹೆಚ್, ಸುರೇಂದ್ರ, ರೋಟರಿ ಕ್ಲಬ್ ಲೊರೆಟೋ ಹಿಲ್ಸ್ ಬಂಟ್ವಾಳ ಅಧ್ಯಕ್ಷ ಸುರೇಶ್ ಶೆಟ್ಟಿ, ತಾಲೂಕು ಬಿಐಇಆರ್ ಟಿ ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ, ನಿಟ್ಟಡೆ ಕ್ಲಸ್ಟರ್ ಸಿ.ಆರ್.ಪಿ ಆರತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಉದ್ಯಮಿಗಳಾದ ಎಸ್ .ಮಹಮ್ಮದ್, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಘುಣಿ ಕಾರ್ಯದರ್ಶಿ ಪದ್ಮನಾಭ ಕೋಟ್ಯಾನ್, ಉಪಸ್ಥಿತರಿದ್ದರು. ರೋಟರಿ ಕ್ಲಬ್ ಲೊರೆಟೋ ಹಿಲ್ಸ್ ಬಂಟ್ವಾಳ ಇವರ ವತಿಯಿಂದ ಶಾಲಾ ಗೌರವ ಶಿಕ್ಷಕಿಯರ ಗೌರವಧನವನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಬಜಿರೆ ಕ್ಲಸ್ಟರ್ ನ ಸಿ.ಆರ್. ಪಿ. ರಾಜೇಶ್ ಸ್ವಾಗತಿಸಿ ಶಾಲಾ ಮುಖ್ಯ ಶಿಕ್ಷಕಿ ಸುಮಿತ್ರ ಎಸ್. ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು. ಶಿಕ್ಷಕರಾದ ಸುಚಿತ್ರ, ಮೆಟಿಲ್ಡಾ ಡಿ’ಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಜಿರೆ ಶಾಲೆಯು ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಹಾಗೂ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.