ಕಲ್ಲೇರಿಯಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಸಾಧಕರಿಗೆ ಸನ್ಮಾನ

0

ತಣ್ಣೀರುಪಂತ: ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ,ಎಸ್.ವೈ.ಎಸ್ ಕುಪ್ಪೆಟ್ಟಿ, ಉರುವಾಲು ಪದವು, ತುರ್ಕಳಿಕೆ ಸರ್ಕಲ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ, ಸ್ವಾತಂತ್ರ್ಯ ಸಂದೇಶ ಭಾಷಣ ಹಾಗೂ ವಿದ್ಯುತ್ ಪವರ್ ಮ್ಯಾನ್ (ಲೈನ್ ಮ್ಯಾನ್) ಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು, ತಣ್ಣೀರುಪಂತ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆಯಿತು.

ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿ ಮಾತನಾಡಿದ, ಕುಪ್ಪೆಟ್ಟಿ ಸರ್ಕಲ್ ಅಧ್ಯಕ್ಷ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ರವರು, ಸ್ವಾತಂತ್ರ್ಯ ದಿನಾಚರಣೆ ನಮ್ಮೆಲ್ಲರ ಬಾಧ್ಯತೆ ಆಗಿದ್ದು, ಜಾತಿ ಧರ್ಮ ಭೇದವಿಲ್ಲದೆ ಅಂದು ಸ್ವಾತಂತ್ರ್ಯ ಹೋರಾಟಗಾರರು ಹೋರಾಡಿದ ಕಾರಣದಿಂದ ನಾವಿಂದು ಸ್ವತಂತ್ರರಾಗಿದ್ದೇವೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಇದರ ಪ್ರಯುಕ್ತ ರಾಜ್ಯದ ಎಲ್ಲಾ ಘಟಕಗಳಲ್ಲಿ ಸಂದೇಶ ಭಾಷಣ ಸಹಿತ ಇತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ರಾಜ್ಯ, ಜಿಲ್ಲಾ ಸಮಿತಿಗಳ ನಿರ್ದೇಶನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಗಾಳಿ, ಮಳೆ, ಚಳಿ, ಬಿಸಿಲು ಎನ್ನದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವಿದ್ಯುತ್ ಪವರ್ ಮ್ಯಾನ್ ಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಸರ್ಕಲ್ ಕೇಂದ್ರೀಕರಿಸಿ ನಡೆಯುತ್ತಿದೆ. ಜಾತಿ ಧರ್ಮ ಭೇದವಿಲ್ಲದೆ ಪ್ರತೀ ಮನೆಗಳಿಗೆ ಬೆಳಕು ಹಂಚುತ್ತಿರುವ ಲೈನ್ ಮಾನ್ ಅಧಿಕಾರಿಗಳನ್ನು ನಾವು ಗೌರವಿಸಬೇಕು. ಅವರೊಂದಿಗೆ ನಾವು ಕೈ ಜೋಡಿಸಬೇಕೆಂದು ಕರೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಉರುವಾಲು ಪದವು ಸರ್ಕಲ್ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಝೈನಿ ನೆರವೇರಿಸಿ ಮಾತನಾಡಿದರು. ಮುಖ್ಯ ಸಂದೇಶ ಭಾಷಣವನ್ನು ಖ್ಯಾತ ವಾಗ್ಮಿ, ಯುವ ವಿದ್ವಾಂಸ ಹುಸೈನ್ ಸಅದಿ ಹೊಸ್ಮಾರು ಮಾಡಿ, ಸ್ವಾತಂತ್ರ್ಯ ದಿನದಂದು ಮಾತ್ರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸದೆ, ಅವರು ಜಾತಿ ಧರ್ಮ ವ್ಯತ್ಯಾಸವಿಲ್ಲದೆ, ಒಂದೇ ತಾಯಿಯ ಮಕ್ಕಳಂತೆ ಸಹೋದರರಾಗಿ ಬದುಕಿ, ಶಾಂತಿ ಸೌಹಾರ್ದತೆಯನ್ನು ಜೀವನದಲ್ಲಿ ಅಳವಡಿಸಿ, ಒಗ್ಗಟ್ಟಾಗಿ ಈ ಭಾರತಕ್ಕೆ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಉಳಿಸಬೇಕಾಗಿದೆ. ಯಾವುದೇ ತ್ಯಾಗವನ್ನು ಸಹಿಸಿಯಾದರೂ ಶಾಂತಿ ಸೌಹಾರ್ದತೆ ಸಹಿಷ್ಣುತೆಯನ್ನು ಉಳಿಸಿ ನೈಜ ಭಾರತೀಯರಾಗಿ ಬದುಕೋಣ ಎಂದು ಕರೆ ನೀಡಿದರು.

ಕಲ್ಲೇರಿ ಮೆಸ್ಕಾಂ ಘಟಕದಲ್ಲಿ ಸೇವೆಗೆಯ್ಯವ 16ರಷ್ಟು ಅಧಿಕಾರಿಗಳು, ಲೈನ್’ಮಾನ್ ಗಳಿಗೆ ಗೌರವ ಸಮರ್ಪಣೆ ಹಾಗೂ ಕಳೆದ 30 ವರ್ಷಗಳಿಂದ ಕಲ್ಲೇರಿಯಲ್ಲಿ ಚಿಕಿತ್ಸೆ ನೀಡುತ್ತಾ ಸರ್ವ ಜನರ ಮನಗೆದ್ದ ಡಾ. ಸಂತೋಷ್ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪವರ್’ಮೆನ್ ಸಂದೀಪ್ ಹಾಗೂ ಡಾ. ಸಂತೋಷ್ ರವರು ಸಂದೇಶ ಭಾಷಣ ಮಾಡಿದರು.

ವೇದಿಕೆಯಲ್ಲಿ ಕೆ.ಎಂ.ಜೆ ಉಪ್ಪಿನಂಗಡಿ ಝೋನ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಉರುವಾಲು ಪದವು ಸರ್ಕಲ್ ಅಧ್ಯಕ್ಷ ಕಾಸಿಂ ಪದ್ಮುಂಜ, ಎಸ್.ವೈ.ಎಸ್ ತುರ್ಕಳಿಕೆ ಅಧ್ಯಕ್ಷ ದಾವುದ್ ಅಶ್ರಫಿ ಬದ್ಯಾರ್, ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ರಫ್ ಉಜಿರ್ಬೆಟ್ಟು, ತಾಜುದ್ದೀನ್ ಅಳಕೆ, ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮಾನ್ ಕೃಷ್ಣ ನೀರಾಡಿ, ಉಪ್ಪಿನಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಸಾಂತ್ವನ ಕಾರ್ಯದರ್ಶಿ ಇಸ್ಮಾಯಿಲ್ ಲತೀಫಿ ಉಜಿರ್ಬೆಟ್ಟು, ಸರ್ಕಲ್ ನಾಯಕರಾದ ಅಬ್ದುಲ್ ರಝಾಕ್ ಸಖಾಫಿ ಕುಪ್ಪೆಟ್ಟಿ, ಹನೀಫ್ ಮದನಿ ನೆಕ್ಕಿಲ್, ರಫೀಕ್ ಉಜಿರ್ಬೆಟ್ಟು, ಮುಸ್ತಫಾ ಅಳಕೆ, ಮುಹಮ್ಮದ್ ರಫೀಕ್ ಸಖಾಫಿ ಮುರ, ಇಕ್ಬಾಲ್ ಕೊಲ್ಯ, ಆದಂ ಅಲ್ ಮದೀನಾ ಕುಪ್ಪೆಟ್ಟಿ, ಲತೀಫ್ ಸಖಾಫಿ ತುರ್ಕಳಿಕೆ, ಲತೀಫ್ ಕನ್ಯಾರಕೋಡಿ, ಬಶೀರ್ ಮುಸ್ಲಿಯಾರ್, ಅಬ್ಬಾಸ್, ಇಬ್ರಾಹಿಂ ಸಅದಿ, ಈಜುಗಾರ ಮುಹಮ್ಮದ್ ಬಂದಾರು, ಡಿವಿಶನ್ ಅಧ್ಯಕ್ಷರಾದ ಶರೀಫ್ ಸಖಾಫಿ ಉಜಿರ್ಬೆಟ್ಟು, ವಿದ್ಯಾತ್ ಗುತ್ತಿಗೆದಾರರಾದ ಅಬ್ದುಲ್ ಬಶೀರ್, ಮೊೖದೀನ್, ಕಾಸಿಂ ಸಅದಿ ತುರ್ಕಳಿಕೆ, ಅಝೀಝ್ ಸಅದಿ ಅಗ್ರಹಾರ, ರಝಾಕ್ ನೇರಂಕಿ, ಅಬ್ದುರ್ರಹ್ಮಾನ್ ಪದ್ಮುಂಜ, ಇಬ್ರಾಹಿಂ, ರಝಾಕ್ ಕನ್ಯಾರಕೋಡಿ, ಸಿದ್ದೀಕ್ ಅಂಡೆಕೇರಿ ಮೊದಲಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here