ಸಮನ್ವಿ ಕಿಶೋರಿ ಸಂಘದ ಉದ್ಘಾಟನಾ ಸಮಾರಂಭ

0

ಪೆರ್ಲ: ಸಮನ್ವಿ ಕಿಶೋರಿ ಸಂಘದ ಉದ್ಘಾಟನೆಯನ್ನು ಪೆರ್ಲ ಶಾಲೆಯ ಮುಖ್ಯೋಪಾದ್ಯಾಯರಾದ ಉಷಾ.ವಿ. ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದಲ್ಲಿ ಆ.15ರಂದು ದೀಪ ಬೆಳಗುವ ಮೂಲಕ ನೆರವೇರಿಸಿದರು.

ಮೇಘಶ್ರೀ ಹಾಗೂ ರೂಪಶ್ರೀ ಇವರ ಪ್ರಾಥನೆಯ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಆರೋಗ್ಯ ಕಾರ್ಯಕರ್ತೆ ರೇಖಾ ಇವರು ಹದಿಹರೆಯಾದ ಮಕ್ಕಳ ಶಾರೀರಿಕ , ಮಾನಸಿಕ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ, ಹೆತ್ತವರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷರಾದ ಲಿಖಿತ ಅಧ್ಯಕ್ಷತೆ ವಹಿಸಿದ್ದರು. ದಿವ್ಯಜೋತಿ, ಅಂಗನವಾಡಿ ಕಾರ್ಯಕರ್ತೆ ಸತ್ಯ ಪ್ರಭಾ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಯಂದಿರು, ಕಿಶೋರಿಯರು, ಹಾಜರಿದ್ದು ಕಾರ್ಯಕ್ರಮದಲ್ಲಿ ಸುಶ್ಮಿತಾ ಸ್ವಾಗತಿಸಿ, ಸುಮ ವಂದಿಸಿದರು. ಧನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಾದ ಅವನಿ, ಭೂಮಿಕಾ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here